ರತ್ಲಂ(ಮಧ್ಯ ಪ್ರದೇಶ):ಸಕ್ರಿಯ ರಾಜಕಾರಣಕ್ಕೆ ಧುಮುಕಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಸದ್ಯ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಬ್ಯಾರಿಕೇಡ್ ಹಾರಿ ಜನತೆ ಬಳಿಗೆ ಸೋನಿಯಾ ಪುತ್ರಿ.. ಮತದಾರರ ಭೇಟಿಗೆ ಪ್ರಿಯಾಂಕಾ ಸರ್ಕಸ್.. - ಮತದಾರ
ಮತದಾರರ ಓಲೈಕೆಗೆ ನಾನಾ ಕಸರತ್ತು ಮಾಡುತ್ತಿರುವ ಸೋನಿಯಾ ಪುತ್ರಿ ಪ್ರಿಯಾಂಕಾ ಗಾಂಧಿ ಸೋಮವಾರ ಬ್ಯಾರಿಕೇಡ್ ಹಾರಿ ಜನರ ಬಳಿಗೆ ತೆರಳಿ ಮಾತನಾಡಿದ್ದಾರೆ. ಆದರೆ, ಅವರ ಭದ್ರತಾ ಸಿಬ್ಬಂದಿಗೆ ಇದು ಒಂದಿಷ್ಟು ಇಕ್ಕಟ್ಟು ತರಿಸಿತ್ತು.
ಪ್ರಿಯಾಂಕ ಗಾಂಧಿ ವಾದ್ರಾ
ಮತದಾರರ ಓಲೈಕೆಗೆ ನಾನಾ ಕಸರತ್ತು ಮಾಡುತ್ತಿರುವ ಸೋನಿಯಾ ಪುತ್ರಿ ಸೋಮವಾರ ಬ್ಯಾರಿಕೇಡ್‌ನ ಮೇಲಿಂದ ಜಿಗಿದು ಜನರ ಬಳಿಗೆ ತೆರಳಿ ಮಾತನಾಡಿದ್ದಾರೆ.
ಮಧ್ಯಪ್ರದೇಶದ ರತ್ಲಂನಲ್ಲಿ ಆಯೋಜನೆಯಾಗಿದ್ದ ಸಾರ್ವಜನಿಕ ಸಭೆಯ ವೇಳೆ ಪ್ರಿಯಾಂಕಾ ಗಾಂಧಿ ಬ್ಯಾರಿಕೇಡ್ ಏರಿ ನೇರವಾಗಿ ಜನತೆ ಬಳಿಗೇ ತೆರಳಿದ್ದಾರೆ. ಕಾಂಗ್ರೆಸ್ ನಾಯಕಿಯ ಈ ನಡೆಯಿಂದ ನೆರೆದಿದ್ದ ಜನತೆಗೆ ಅಚ್ಚರಿಯ ಜೊತೆಗೆ ಖುಷಿಯಾಗಿದೆ. ಆದರೆ, ಅವರ ಭದ್ರತಾ ಸಿಬ್ಬಂದಿಗೆ ಒಂದಿಷ್ಟು ಟೆನ್ಷನ್ ಹೆಚ್ಚಿಸಿದ್ದಂತೂ ಸುಳ್ಳಲ್ಲ.