ಕರ್ನಾಟಕ

karnataka

ETV Bharat / briefs

ಪ್ರಿಯಾಂಕ ತೆರಳುವ ವೇಳೆ ಮೋದಿ ಘೋಷಣೆ... ಕಾರಿನಿಂದಿಳಿದು ಹಸ್ತಲಾಘವ ಮಾಡಿದ ಜ್ಯೂ.ಇಂದಿರಾ - ಮೋದಿ

ಮಧ್ಯಪ್ರದೇಶದಲ್ಲಿ ಪ್ರಚಾರಕ್ಕೆ ತೆರಳುವ ವೇಳೆ ಮೋದಿ ಘೋಷಣೆ ಕೂಗಿದ ಮೋದಿ ಬೆಂಬಲಿಗರ ಬಳಿ ತೆರಳಿ ಹಸ್ತಲಾಘವ ಮಾಡಿ ಗಮನ ಸೆಳೆದರು.

ಪ್ರಿಯಾಂಕ

By

Published : May 14, 2019, 11:49 AM IST

ಇಂದೋರ್​​: ಬಿಡುವಿಲ್ಲದ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕ ಗಾಂಧಿ ವಾದ್ರಾ ವಿಶೇಷ ಕಾರಣಕ್ಕೆ ಸುದ್ದಿಯಾಗಿದ್ದಾರೆ.

ಮಧ್ಯಪ್ರದೇಶದಲ್ಲಿ ಪ್ರಚಾರಕ್ಕೆ ತೆರಳುವ ವೇಳೆ ಮೋದಿ ಘೋಷಣೆ ಕೂಗಿದ ಮೋದಿ ಬೆಂಬಲಿಗರ ಬಳಿ ತೆರಳಿ ಹಸ್ತಲಾಘವ ಮಾಡಿದ್ದಾರೆ.

ಹೆಚ್ಚಿನ ಓದಿಗಾಗಿ:

ಬ್ಯಾರಿಕೇಡ್​ ಹಾರಿ ಜನತೆ ಬಳಿಗೆ ಸೋನಿಯಾ ಪುತ್ರಿ.. ಮತದಾರರ ಭೇಟಿಗೆ ಪ್ರಿಯಾಂಕಾ ಸರ್ಕಸ್..

ಪ್ರಿಯಾಂಕ ಗಾಂಧಿ ಹಾಗೂ ಆಕೆಯ ಭದ್ರತಾ ಪಡೆಯ ವಾಹನ ವಿಮಾನ ನಿಲ್ದಾಣದಿಂದ ತೆರಳುತ್ತಿದ್ದ ವೇಳೆ ಕೆಲ ಮೋದಿ ಅಭಿಮಾನಿಗಳು ಪ್ರಿಯಾಂಕಳನ್ನು ನೋಡಿ "ಮೋದಿ ಮೋದಿ" ಎಂದು ಘೋಷಣೆ ಕೂಗಿದ್ದಾರೆ.

ಕೊಂಚ ಮುಂದಕ್ಕೆ ಸಾಗಿದ್ದ ಪ್ರಿಯಾಂಕ ಇದ್ದ ವಾಹನ ತಕ್ಷಣವೇ ನಿಂತಿದೆ. ಕಾರಿನಿಂದ ಇಳಿದ ಪ್ರಿಯಾಂಕ ನೇರವಾಗಿ ಘೋಷಣೆ ಕೂಗಿದವರ ಬಳಿ ನಗುತ್ತಾ ಬಂದು ನೀವೆಲ್ಲಿದ್ದಿರೋ ನಾನು ಅಲ್ಲೇ ಇದ್ದೀನಿ ಎಂದು ಹಸ್ತಲಾಘವ ಮಾಡಿ ಆಲ್​ ದಿ ಬೆಸ್ಟ್ ಎಂದಿದ್ದಾರೆ. ಇದಕ್ಕೆ ಮೋದಿ ಅಭಿಮಾನಿಗಳು ಆಲ್​ ದಿ ಬೆಸ್ಟ್ ಎಂದು ಪ್ರತಿಯಾಗಿ ಹೇಳಿದ್ದಾರೆ. ಈ ಮೂಲಕ ನಿಜವಾದ ಗಾಂಧಿವಾದ ಅನುಸರಿಸಿ, ನಿತ್ಯ ಕೆಸರೆರಚಾಟ ಮಾಡಿಕೊಳ್ಳುವ ಮಮತಾ, ಮಾಯಾವತಿ ಸೇರಿದಂತೆ ಇನ್ನಿತರರಿಗೆ ಮಾದರಿಯಾಗಿದ್ದಾರೆ. ಈ ನಡೆ ಸ್ವತಃ ಸಹೋದರ ರಾಹುಲ್​ ಗಾಂಧಿಗೂ ಮಾರ್ಗದರ್ಶನವಾಗಿದೆ.

ABOUT THE AUTHOR

...view details