ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚುನಾವಣೆ ರಂಗೇರಿದ್ದು, ತಮ್ಮ ಅಭ್ಯರ್ಥಿಗಳ ಪರ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಬಿರುಸಿನ ಪ್ರಚಾರ ನಡೆಸಿದ್ದಾರೆ.
ದೆಹಲಿಯಲ್ಲಿ ಇಂದಿರಾ ಮೊಮ್ಮಗಳ ಮಿಂಚಿನ ಸಂಚಾರ... ಮಿನಿಬಸ್ ಮೇಲೇರಿ ಭರ್ಜರಿ ಮತಬೇಟೆ..! - ಶೀಲಾ ದೀಕ್ಷಿತ್
ಮಿನಿಬಸ್ ಮೇಲೇರಿ ಈಶಾನ್ಯ ದೆಹಲಿಯ ತಮ್ಮ ಅಭ್ಯರ್ಥಿ ಶೀಲಾ ದೀಕ್ಷಿತ್ ಪರ ಪ್ರಿಯಾಂಕ ಗಾಂಧಿ ವಾದ್ರಾ ಮತಬೇಟೆ ನಡೆಸಿದರು. ಪ್ರಚಾರದ ವೇಳೆ ಸೇರಿದ್ದ ಸಾವಿರಾರು ಕಾರ್ಯಕರ್ತರು ಹೂವಿನ ಮಳೆಗರೆದಿದ್ದು ಇಂದಿನ ಸ್ಪೆಷಲ್.
ಪ್ರಿಯಾಂಕ ಗಾಂಧಿ ವಾದ್ರಾ
ಮಿನಿಬಸ್ ಮೇಲೇರಿ ಈಶಾನ್ಯ ದೆಹಲಿಯ ತಮ್ಮ ಅಭ್ಯರ್ಥಿ ಶೀಲಾ ದೀಕ್ಷಿತ್ ಪರ ಪ್ರಿಯಾಂಕ ಗಾಂಧಿ ವಾದ್ರಾ ಮತಬೇಟೆ ನಡೆಸಿದರು. ಪ್ರಚಾರದ ವೇಳೆ ಸೇರಿದ್ದ ಸಾವಿರಾರು ಕಾರ್ಯಕರ್ತರು ಹೂವಿನ ಮಳೆಗರೆದಿದ್ದಾರೆ.
ಮಧ್ಯಾಹ್ನದ ಬಳಿಕ ದಕ್ಷಿಣ ದೆಹಲಿಯಲ್ಲಿ ಮತ ಪ್ರಚಾರ ನಡೆಸಿದ ಇಂದಿರಾ ಮೊಮ್ಮಗಳು, ಕಾಂಗ್ರೆಸ್ ಅಭ್ಯರ್ಥಿ ವಿಜೇಂದರ್ ಸಿಂಗ್ ಪರ ಮತ ಯಾಚಿಸಿದರು. ದಕ್ಷಿಣಪುರಿಯಲ್ಲಿ ಸೇರಿದ್ದ ಸಾವಿರಾರು ಮಂದಿಯ ಬಳಿ ಕಾಂಗ್ರೆಸ್ಗೆ ವೋಟ್ ಮಾಡುವಂತೆ ಪ್ರಿಯಾಂಕ ಮನವಿ ಮಾಡಿದರು.