ಲಂಡನ್:ಬ್ರಿಟನ್ ಅರಸೊತ್ತಿಗೆಯ ಕಣ್ಮಣಿ ಪ್ರಿನ್ಸ್ ಹ್ಯಾರಿ ದಂಪತಿಗೆ ಗಂಡು ಮಗುವಾಗಿರುವ ವಿಷಯ ಗೊತ್ತೇ ಇದೆ. ನಿನ್ನೆ ಕ್ರೈಸ್ಟ್ ಚರ್ಚ್ ಹಾಲ್ನಲ್ಲಿ ರಾಯಲ್ ಬೇಬಿಯನ್ನು ವಿಶ್ವಕ್ಕೆ ಪರಿಚಯಿಸಲಾಗಿತ್ತು. ಇಂದು ನಾಮಕರಣ ಕೂಡ ಆಗಿದೆ.
ಬ್ರಿಟನ್ ರಾಜಕುವರನಿಗಿಲ್ಲ ರಾಯಲ್ ಟೈಟಲ್... ಅಷ್ಟಕ್ಕೂ ಹ್ಯಾರಿ ದಂಪತಿ ಪ್ರತಿಷ್ಠೆಯ ಕೊಂಡಿ ತಿರಸ್ಕರಿಸಿದ್ದೇಕೆ? - ರಾಯಲ್ ಬೇಬಿ
ಹ್ಯಾರಿ ಮತ್ತು ಮೇಗನ್ ಮರ್ಕೆಲ್ ಇಬ್ಬರೂ ತಮ್ಮ ಮಗ ಸಾಮಾನ್ಯರಂತೆ ಬದುಕಬೇಕೆಂದು ಬಯಸಿದ್ದಾರೆ. ಇದಕ್ಕಾಗಿ ಅವರು ರಾಯಲ್ ಟೈಟಲ್ ಅನ್ನು ತಿರಸ್ಕರಿಸಿ ಸಾಮಾನ್ಯ ಹೆಸರನ್ನಷ್ಟೆ ಇಟ್ಟಿದ್ದಾರೆ.
ಬ್ರಿಟನ್ ರಾಜ ಕುವರನಿಗೆ ಆರ್ಶೀಸ್ ಹ್ಯಾರಿಸನ್ ಮೌಂಟ್ ಬ್ಯಾಟನ್ ವಿಂಡ್ಸರ್ ಎಂದು ಹೆಸರಿಡಲಾಗಿದೆ. ಹ್ಯಾರಿಯ ಅಣ್ಣ ಪ್ರಿನ್ಸ್ ವಿಲಿಯಮ್ಸ್ಗೆ ಪ್ರಿನ್ಸ್ ಜಾರ್ಜ್ ಆಫ್ ಕೇಂಬ್ರಿಡ್ಜ್, ಪ್ರಿನ್ಸ್ ಲೂಯೀಸ್ ಆಫ್ ಕೇಂಬ್ರಿಡ್ಜ್ ಹಾಗೂ ಪ್ರಿನ್ಸೆಸ್ ಶಾರ್ಲೆ ಎಂಬ ಮೂರು ಮಕ್ಕಳಿವೆ. ಈ ಮೂವರಿಗೂ ರಾಯಲ್ ಟೈಟಲ್ ಇರುವಾಗಿ ಹ್ಯಾರಿ ಮಗುವಿಗೇಕೆ ಸಾಮಾನ್ಯ ಹೆಸರು ಅಂತೀರಾ. ಇದರ ಹಿಂದೆ ಹ್ಯಾರಿ ದಂಪತಿಯ ಆದರ್ಶನೀಯ ನಿರ್ಧಾರ ಅಡಗಿದೆ.
ಹ್ಯಾರಿ ಮತ್ತು ಮೇಗನ್ ಮರ್ಕೆಲ್ ಇಬ್ಬರೂ ತಮ್ಮ ಮಗ ಸಾಮಾನ್ಯರಂತೆ ಬದುಕಬೇಕೆಂದು ಬಯಸಿದ್ದಾರೆ. ಇದಕ್ಕಾಗಿ ಅವರು ರಾಯಲ್ ಟೈಟಲ್ ಅನ್ನು ತಿರಸ್ಕರಿಸಿ ಸಾಮಾನ್ಯ ಹೆಸರನ್ನಷ್ಟೆ ಇಟ್ಟಿದ್ದಾರೆ. ಇನ್ನು ಹ್ಯಾರಿ ಪುತ್ರನಿಗಿಟ್ಟಿರುವ ಆರ್ಶೀಸ್ ಎಂಬ ಹೆಸರು ಭಾರತೀಯ ಮೂಲದ್ದು ಎಂಬ ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಆರ್ಶೀಸ್ ಪಂಜಾಬಿ ಎಂಬ ಭಾರತೀಯ ಮೂಲದ ನಟಿ ಈಗಾಗಲೇ ಬ್ರಿಟನ್ನಲ್ಲಿ ಭಾರಿ ಖ್ಯಾತಿ ಪಡೆದಿದ್ದಾರೆ.