ಕರ್ನಾಟಕ

karnataka

ETV Bharat / briefs

ಹೆರಿಗೆ ನೋವಿನಲ್ಲೂ ಹಕ್ಕು ಚಲಾಯಿಸಿ ನಿಷ್ಠೆ ಮೆರೆದ ತುಂಬು ಗರ್ಭಿಣಿಯರು..! - ಹೆರಿಗೆ

ಹೆರಿಗೆ ನೋವಿನಲ್ಲಿ ಮತ ಚಲಾಯಿಸಬೇಕೆಂದು ಹಠ ಹಿಡಿದ ತುಂಬು ಗರ್ಭಿಣಿಯೋರ್ವರು ಹೆರಿಗೆಗೆಂದು ಆಸ್ಪತ್ರೆಯಲ್ಲಿ ದಾಖಲಾದರೂ ಪತಿಯ ಸಹಾಯದೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ. ಇಂತಹುದೇ ಘಟನೆ ಮಂಡ್ಯದಲ್ಲೂ ನಡೆದಿದೆ.

ಗರ್ಭಿಣಿ

By

Published : Apr 18, 2019, 4:46 PM IST

ಮಂಗಳೂರು: ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ತುಂಬು ಗರ್ಭಿಣಿ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದ ಬಳಿಕ ಆಸ್ಪತ್ರೆಗೆ ಸೇರಿದ ಕೆಲಹೊತ್ತಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.

ಹೆರಿಗೆ ನೋವಿನಲ್ಲಿ ಮತ ಚಲಾಯಿಸಬೇಕೆಂದು ಹಠ ಹಿಡಿದ ತುಂಬು ಗರ್ಭಿಣಿಯೋರ್ವರು ಆಸ್ಪತ್ರೆಯಲ್ಲಿ ದಾಖಲಾದರೂ ಪತಿಯ ಸಹಾಯದೊಂದಿಗೆ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ್ದಾರೆ. ಈ ಅಪರೂಪದ ಘಟನೆ ಪುತ್ತೂರು ತಾಲೂಕಿನ ಉರ್ಲಾಂಡಿ ಬೂತ್ 119ರಲ್ಲಿ ನಡೆದಿದೆ.

ಉರ್ಲಾಂಡಿ ನಿವಾಸಿ ಯೋಗಾನಂದ ಅವರ ಪತ್ನಿ ಮೀನಾಕ್ಷಿ ಅವರು ತುಂಬು ಗರ್ಭಿಣಿಯಾಗಿದ್ದು ಇಂದು ಬೆಳಿಗ್ಗೆ ಹೊಟ್ಟೆ ನೋವು ಎಂದು ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನೇನೂ ಹೆರಿಗೆಯಾಗುವ ಸಾಧ್ಯತೆ ಎನ್ನುವಷ್ಟರಲ್ಲಿ ಮೊದಲು ತನ್ನ ಹಕ್ಕು ಚಲಾಯಿಸಬೇಕು ಎಂದು ಪತಿ ಯೋಗಾನಂದ ಸಹಾಯದಲ್ಲಿ 119 ಮತಗಟ್ಟೆ ಇರುವ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಮತ ಚಲಾಯಿಸಿ ಬಳಿಕ ಆಸ್ಪತ್ರೆಗೆ ಸೇರಿದರು. ಆಸ್ಪತ್ರೆಗೆ ಸೇರಿದ ಕೆಲವೆ ನಿಮಿಷದಲ್ಲಿ ಅವರಿಗೆ ಹೆರಿಗೆಯೂ ಆಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಮಂಡ್ಯದ ಪಾಂಡವಪುರದಲ್ಲೂ ಇಂತಹುದೇ ಘಟನೆ ನಡೆದಿದ್ದು, ತುಂಬು ಗರ್ಭಿಣಿ ಮತ ಚಲಾಯಿಸಿ ಮಾದರಿಯಾಗಿದ್ದಾರೆ. ತಮ್ಮ ಪತಿಯೊಂದಿಗೆ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ್ದಾರೆ.

ABOUT THE AUTHOR

...view details