ಕರ್ನಾಟಕ

karnataka

ETV Bharat / briefs

ಕೊಡವರ ಸಾಂಪ್ರದಾಯಿಕ ಉಡುಗೆಯಲ್ಲಿ ಸಂಸತ್​ ಪ್ರವೇಶಿಸಿದ ಪ್ರತಾಪ್​ ಸಿಂಹ - undefined

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಕೊಡಗಿನ ಉಡುಗೆ ತೊಟ್ಟು ಸಂಸತ್ ಪ್ರವೇಶಿಸಿದ್ದು ಎಲ್ಲರ ಗಮನ ಸೆಳೆಯುವಂತಿತ್ತು.

ಪ್ರತಾಪ್​ ಸಿಂಹ

By

Published : Jun 17, 2019, 5:06 PM IST

ಮೈಸೂರು: ಲೋಕಸಭಾ ಸಮರದಲ್ಲಿ 2ನೇ ಬಾರಿ ಗೆಲುವಿನ ನಗೆ ಬೀರಿದ ಪ್ರತಾಪ್​ ಸಿಂಹ ಕೊಡಗಿನ ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಸತ್ ಪ್ರವೇಶ ಮಾಡಿದರು.

ಇಂದಿನಿಂದ 17 ನೇ ಲೋಕಸಭೆಯ ಅಧಿವೇಶನ ಆರಂಭವಾಗಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಕೊಡಗಿನ ಉಡುಗೆ ತೊಟ್ಟು ಸಂಸತ್ ಪ್ರವೇಶಿಸಿದ್ದು ಎಲ್ಲರ ಗಮನ ಸೆಳೆಯುವಂತಿತ್ತು.

ಕೊಡಗಿನ ಸಾಂಪ್ರದಾಯಿಕ ಉಡುಗೆ ತೊಟ್ಟ ಪ್ರತಾಪ್​ ಸಿಂಹ

ಸೊಂಟದ ಬಳಿ ಕೊಡಗಿನ ವೀರ ಪ್ರತೀಕ ಖಡ್ಗವನ್ನು ಧರಿಸಿ ಸಂಸತ್ ಪ್ರವೇಶ ಮಾಡಿದರು. ನಂತರ ತಮ್ಮ ಆತ್ಮೀಯರೊಂದಿಗೆ ಸಂಸತ್ ಮುಂಭಾಗ ಕೊಡಗಿನ ಉಡುಗೆಯಲ್ಲೇ ಫೋಟೋಗೆ ಪೋಸ್​ ನೀಡಿದರು. ಶೋಭಾ ಕರಂದ್ಲಾಜೆ, ಯುವ ಸಂಸದ ತೇಜಸ್ವಿ ಸೂರ್ಯ, ಡಿ.ಕೆ.ಶಿವಕುಮಾರ್​ ಸೇರಿದಂತೆ ಅನೇಕರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details