ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಇಡೀ ರಾಜ್ಯವೇ ಲಾಕ್ಡೌನ್ ಆಗಿದೆ. ಇದರ ಪರಿಣಾಮ ಆರ್ಥಿಕತೆಯ ಎಲ್ಲಾ ಕ್ಷೇತ್ರಗಳ ಮೇಲೂ ಆಗಿದೆ. ಮುಖ್ಯವಾಗಿ ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಬಂದ್ ಆಗಿದ್ದು, ಸಿನಿಮಾ ಪ್ರದರ್ಶನ ಹಾಗು ಚಿತ್ರೀಕರಣಗಳು ಸ್ಥಗಿತಗೊಂಡಿದೆ. ಸದಾ ಸಿನಿಮಾ ಚಿತ್ರೀಕರಣ, ಫಿಲ್ಮ್ ಪ್ರಮೋಷನ್ ಅಂತಾ ಬ್ಯುಸಿ ಇರುತ್ತಿದ್ದ ತಾರೆಯರು, ಮನೆ ಸೇರಿ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ.
ಈ ಲಾಕ್ಡೌನ್ ಸಮಯದಲ್ಲಿ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಸಂಪೂರ್ಣವಾಗಿ ಮಕ್ಕಳು, ಪತ್ನಿ ಹಾಗೂ ಸಂಬಂಧಿಕರ ಜೊತೆ ಖುಷಿಯಾಗಿದ್ದಾರೆ. ಈ ಸಮಯದಲ್ಲಿ ಅವರು ಹೊಸ ವಿದ್ಯೆಯನ್ನು ಕಲಿತಿದ್ದು, ಈ ಮೂಲಕ ಅಭಿಮಾನಿಗಳಿಗೆ ಮನರಂಜನೆ ಸಿಕ್ಕಿದೆ.
ವರ್ಕೌಟ್ ಮಾಡುತ್ತಿರುವ ಅಪ್ಪು ಕಷ್ಟಕರವಾದ ಸ್ಟಂಟ್, ಅಡ್ವೆಂಚರ್ಸ್ ಮಾಡುವ ಪುನೀತ್ ರಾಜ್‍ಕುಮಾರ್, ಅಡುಗೆ ಮಾಡೋದನ್ನು ಮಾತ್ರ ಕಲಿತಿರಲಿಲ್ಲ. ಆದ್ರೆ ಅವರು ನಾನ್ ವೆಜ್‌ಪ್ರಿಯ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷ್ಯ. ಚಿಲ್ಲಿ ಚಿಕನ್, ನಾಟಿ ಕೋಳಿ ಫ್ರೈ, ಮಟನ್ ಬಿರಿಯಾನಿ ಅಂದರೆ ಅಪ್ಪುಗೆ ಪಂಚಪ್ರಾಣ. ಇದೀಗ ಅವರು ತಮ್ಮ ಮುದ್ದಿನ ಮಕ್ಕಳು ಹಾಗು ಪತ್ನಿ ಅಶ್ವಿನಿ ಅವರಿಗೆ ತಮ್ಮ ಕೈಯ್ಯಾರೆ ಮಾಂಸಾಹಾರ ತಯಾರಿಸಿ ಉಣಬಡಿಸಿದ್ದಾರಂತೆ.
ಪುನೀತ್ ರಾಜ್‌ಕುಮಾರ್, ಪತ್ನಿ ಅಶ್ವಿನಿ ಮತ್ತು ಮಕ್ಕಳು ಚಿಕನ್ ಬಿರಿಯಾನಿಯನ್ನು ಅಪ್ಪು ಅವರು ಬಹಳ ಚೆನ್ನಾಗಿ ಮಾಡಿದ್ದರು ಅನ್ನೋದು ಅವರ ಆಪ್ತರ ಮಾತು. ಇನ್ನು ಪುನೀತ್ ರಾಜ್‍ಕುಮಾರ್ ತಮಗೆ ಇಷ್ಟವಾದ ಯಾವುದೇ ಊಟವನ್ನು ಮಾಡಿದ್ರೂ, ವರ್ಕ್‌ಔಟ್ ಮಾಡೋದನ್ನು ಬಿಟ್ಟಿಲ್ಲ. ಪ್ರತಿದಿನ 'ಯುವರತ್ನ' ಒಂದು ಗಂಟೆ ಮನೆಯಲ್ಲೇ ಕಸರತ್ತು ಮಾಡ್ತಾರಂತೆ.