ಕರ್ನಾಟಕ

karnataka

ETV Bharat / briefs

ಪಾಕ್​ಗೆ ಪೂನಂ ಪಾಂಡೆ ತಿರುಗೇಟು! ಮಾದಕ ನಟಿ ವಿಡಿಯೋ ನೋಡಿ ಫ್ಯಾನ್ಸ್​ ಕಕ್ಕಾಬಿಕ್ಕಿ! - ಲಂಡನ್​

ಭಾರತದ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಕುರಿತು ಪಾಕ್​ ಮಾಡಿದ್ದ ವಿಡಿಯೋಗೆ ನಟಿ ಪೂನಂ ಪಾಂಡೆ ಸಖತ್​ ಆಗಿ ತಿರುಗೇಟು ನೀಡಿದ್ದಾರೆ.

ಪೂನಂ ಪಾಂಡೆ

By

Published : Jun 15, 2019, 6:21 PM IST

ಲಂಡನ್​​:ನಾಳೆ ಐಸಿಸಿ ವಿಶ್ವಕಪ್​​ನಲ್ಲಿ ಭಾರತ-ಪಾಕ್ ಕಾದಾಡಲಿವೆ. ಉಭಯ ದೇಶದ ಕ್ರೀಡಾಭಿಮಾನಿಗಳು ಈ ರೋಚಕ ಪಂದ್ಯ ಕಣ್ತುಂಬಿಕೊಳ್ಳಲು ತುದಿಗಾಲ ಮೇಲೆ ನಿಂತಿದ್ದಾರೆ. ಈ ವೇಳೆ ಮಾದಕ ನಟಿ ಪೂನಂ ಪಾಂಡೆ ಪಾಕ್ ಅಭಿಮಾನಿಗಳಿಗೆ ಸಖತ್‌ ಆಗಿ ತಿರುಗೇಟು ಕೊಟ್ಟಿದ್ದಾರೆ.

ಪಾಕ್​​ನ ಕ್ರೀಡಾಭಿಮಾನಿಗಳು ಭಾರತದ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರ ವಿಡಿಯೋ ಮುಂದಿಟ್ಟುಕೊಂಡು ಭಾರತಕ್ಕೆ ಟಾಂಗ್​ ನೀಡುವ ಕೆಲಸ ಮಾಡಿದ್ದರು. ಇದೀಗ ಇದೇ ವಿಷಯವನ್ನಿಟ್ಟುಕೊಂಡು ಪಾಕ್​ಗೆ ನಟಿ ಪೂನಂ ಪಾಂಡೆ ಅಟ್ಯಾಕ್ ಮಾಡಿದ್ದಾರೆ.

ತಮ್ಮ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್​ ಮಾಡಿರುವ ನಟಿ, ವಾಟ್ಸ​​ಪ್​​ನಲ್ಲಿ ಅಭಿನಂದನ್​ ಅವರಿಗೆ ಅವಹೇಳನ ಮಾಡಿರುವ ವಿಡಿಯೋ ನೋಡಿದೆ. ಪಾಕ್​ ವರ್ತನೆ ಸರಿಯಲ್ಲ. ಅವರಿಗೆ ಟೀ ಕಪ್​ ಮೇಲೆ ಜೋಕ್​ ಮಾಡುವ ಅರ್ಹತೆ ಇಲ್ಲ. ಹೀಗಾಗಿ ಈ ಕಪ್​ ತೆಗೆದುಕೊಳ್ಳಿ ಎಂದು ತಮ್ಮ ಒಳ ಉಡುಪು ನೀಡಿದ್ದಾರೆ. ಪೂನಂ ಪಾಂಡೆ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ABOUT THE AUTHOR

...view details