ಕರ್ನಾಟಕ

karnataka

ETV Bharat / briefs

ವಿಡಿಯೋ ಕಾಲ್ ಮೂಲಕ ತನ್ನ ಸಿಬ್ಬಂದಿಗೆ ನೈತಿಕ ಸ್ಥೈರ್ಯ ತುಂಬಿದ ಪೊಲೀಸ್ ಇಲಾಖೆ

ಕರ್ತವ್ಯ ನಿರ್ವಹಣೆ ವೇಳೆ ಸೋಂಕಿಗೆ ತುತ್ತಾಗಿದ್ದು, ಕೆಲವರು ಆಸ್ಪತ್ರೆಯಲ್ಲಿ ಇನ್ನು ಹಲವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ..

ನೈತಿಕ ಸ್ಥೈರ್ಯ ತುಂಬಿದ ಪೊಲೀಸ್ ಇಲಾಖೆ
ನೈತಿಕ ಸ್ಥೈರ್ಯ ತುಂಬಿದ ಪೊಲೀಸ್ ಇಲಾಖೆ

By

Published : Apr 28, 2021, 6:12 PM IST

Updated : Apr 28, 2021, 9:57 PM IST

ಬೆಂಗಳೂರು :ಕೋವಿಡ್ 2 ನೇ ಅಲೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ನೂರಾರು ಸಂಚಾರಿ ಪೊಲೀಸರಿಗೆ ಸೋಂಕು ದೃಢಪಟ್ಟಿದೆ.

ಇಂತಹವರಿಗೆ ಆತ್ಮಸ್ಥೈಯ ತುಂಬಲು ನಗರ ಸಂಚಾರ ಪೊಲೀಸ್ ಠಾಣೆಗಳ ಇನ್​ಸ್ಪೆಕ್ಟರ್ ಹಾಗೂ ಎಸಿಪಿಗಳು ವಿಡಿಯೋ ಕಾಲ್ ಮೂಲಕ ಬುಧವಾರ ಮಾತನಾಡಿದ್ದಾರೆ.

ವಿಜಯನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 23 ಮಂದಿಗೆ ಸೋಂಕು ದೃಢಪಟ್ಟಿದ್ದು, ಠಾಣಾ ಇನ್​ಸ್ಪೆಕ್ಟರ್ ಹಾಗೂ ಪೂರ್ವ ಉಪವಿಭಾಗದ ಎಸಿಪಿ ವಿಡಿಯೋ ಕರೆ ಮಾಡಿ, ಯೋಗಕ್ಷೇಮ ವಿಚಾರಿಸಿದರು.

ಮಲ್ಲೇಶ್ವರ, ಪೀಣ್ಯ, ಬ್ಯಾಟರಾಯನಪುರ, ಚಿಕ್ಕಪೇಟೆ ಸೇರಿ ವಿವಿಧ ಸಂಚಾರ ಪೊಲೀಸ್ ಠಾಣೆಗಳ ಇನ್​ಸ್ಪೆಕ್ಟರ್ ವಿಡಿಯೋ ಕರೆ ಮಾಡಿ ಸಿಬ್ಬಂದಿಗೆ ನೈತಿಕ ಸ್ಥೈರ್ಯ ತುಂಬಿದರು.

ಕರ್ತವ್ಯ ನಿರ್ವಹಣೆ ವೇಳೆ ಸೋಂಕಿಗೆ ತುತ್ತಾಗಿದ್ದು, ಕೆಲವರು ಆಸ್ಪತ್ರೆಯಲ್ಲಿ ಇನ್ನು ಹಲವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಂಕಿನಿಂದ ಆತಂಕಗೊಂಡಿದ್ದು, ಅವರಿಗೆ ಧೈರ್ಯ ತುಂಬಲು ಸಂಚಾರಿ ಠಾಣಾ ಪೊಲೀಸರು ವಿಡಿಯೋ ಕರೆ ಮಾಡಿದರು. ನಗರ ಪಶ್ಚಿಮ ವಿಭಾಗದ ಡಿಸಿಪಿ ಕುಲದೀಪ್ ಕೂಡ ವಿಡಿಯೋ ಕಾನ್ಪರೆನ್ಸ್ ಮುಖಾಂತರ ಕರೆ ಮಾಡಿ ಆರೋಗ್ಯ ವಿಚಾರಿದರು.

Last Updated : Apr 28, 2021, 9:57 PM IST

ABOUT THE AUTHOR

...view details