ಲಖನೌ:ಕ್ರಿಕೆಟರ್ ಮೊಹಮ್ಮದ್ ಶಮಿ ವಿರುದ್ಧ ಈಗಾಗಲೇ ಅನೇಕ ಗಂಭೀರ ಆರೋಪ ಮಾಡಿ ಕೋರ್ಟ್ ಮೆಟ್ಟಿಲೇರಿರುವ ಹಸೀನ್ ಜಹಾನ್ ಗಂಡನ ಮನೆಗೆ ತೆರಳಿ ಹೈಡ್ರಾಮಾ ಸೃಷ್ಟಿಸಿದ್ದಾಳೆ. ಹಸೀನ್ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ಯುಪಿ ಪೊಲೀಸರು ಬಂಧಿಸಿ ಬಳಿಕ ರಿಲೀಸ್ ಮಾಡಿರುವ ಘಟನೆ ನಡೆದಿದೆ.
ಉತ್ತರಪ್ರದೇಶದ ಅಮರೋಹಾದಲ್ಲಿರುವ ಶಮಿ ಮನೆಗೆ ತೆರಳಿರುವ ಹಸೀನಾ, ಶಮಿ ಅವರ ತಾಯಿ ಮತ್ತು ಸಹೋದರರ ಜೊತೆ ಮಾತಿನ ಚಕಮಕಿ ನಡೆಸಿದ್ದಾಳೆ. ಇದೇ ವೇಳೆ ಮನೆಯಿಂದ ಹೊರಹೋಗುವಂತೆ ಅವರು ತಿಳಿಸಿದಾಗ ಮನೆಯ ರೂಂನಲ್ಲಿ ತನ್ನನ್ನು ಹಾಗೂ ಮಗಳನ್ನ ಕೂಡಿ ಹಾಕಿಕೊಂಡು ಲಾಕ್ ಮಾಡಿಕೊಂಡಿದ್ದಾಳೆ. ಈ ವೇಳೆ ಮನೆಯಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿರುವ ಪೊಲೀಸರು ಹಸೀನ್ ಜಹಾನ್ನನ್ನು ಬಂಧನ ಮಾಡಿ ತದನಂತರ ರಿಲೀಸ್ ಮಾಡಿದ್ದಾರೆ.