ಕರ್ನಾಟಕ

karnataka

ETV Bharat / briefs

ನೆಚ್ಚಿನ ತಾಣ ಕಾಶಿಗೆ ಬರುವುದಕ್ಕೂ ಮುನ್ನ ಮೋದಿ ಟ್ವೀಟ್​... ಹರ್​ ಹರ್​ ಮಹಾದೇವ್​ ಎಂದ ನಮೋ! - ಟ್ವೀಟ್​

ವಾರಣಾಸಿಯಲ್ಲಿ ನಮೋ ರೋಡ್​ ಶೋ ನಡೆಸುತ್ತಿದ್ದು, ಅದಕ್ಕೂ ಕೆಲ ನಿಮಿಷಗಳ ಮುಂಚಿತವಾಗಿ ಟ್ವೀಟ್​ ಮಾಡಿದ್ದಾರೆ.

ಮೋದಿ ರೋಡ್ ಶೋ

By

Published : Apr 25, 2019, 5:15 PM IST

ವಾರಣಾಸಿ:ಉತ್ತರಪ್ರದೇಶದ ವಾರಣಾಸಿಯಲ್ಲಿ ನಮೋ ಬೃಹತ್​ ರೋಡ್​ ಶೋ ನಡೆಸುತ್ತಿದ್ದು, ಅದಕ್ಕೂ ಕೆಲ ನಿಮಿಷಗಳ ಮುಂಚಿತವಾಗಿ ನಮೋ ಟ್ವೀಟ್​ ಮಾಡಿದ್ದಾರೆ.

ಈಗಷ್ಟೇ ದರ್ಬಾಂಗ್​​ ಹಾಗೂ ಬಾಂಡಾದಲ್ಲಿ ಪ್ರಚಾರ ನಡೆಸಿ ಬಂದಿರುವ ನನಗೆ, ನೆಚ್ಚಿನ ಕಾಶಿಯಲ್ಲಿ ಪ್ರಚಾರದಲ್ಲಿ ಭಾಗಿಯಾಗುವುದು ಖುಷಿ ನೀಡುತ್ತಿದೆ. ಅಲ್ಲಿನ ಸಹೋದರ-ಸಹೋದರಿಯರೊಂದಿಗೆ ಮುಖಾಮುಖಿಯಾಗಿ ಮಾತನಾಡುವುದಕ್ಕೂ ಮತ್ತೊಂದು ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿ ಎಂದು ಬರೆದುಕೊಂಡಿದ್ದಾರೆ.

ವಾರಣಾಸಿ ಕ್ಷೇತ್ರದಿಂದ ನಮೋ ನಾಳೆ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಮುನ್ನಾದಿನವಾದ ಇಂದು ಬೃಹತ್​ ರೋಡ್​ ಶೋನಲ್ಲಿ ಭಾಗಿಯಾಗಿದ್ದಾರೆ. ರೋಡ್​ ಶೋ ಮುಗಿದ ಬಳಿಕ ನಮೋ ಗಂಗಾ ಆರತಿಯಲ್ಲಿ ಭಾಗಿಯಾಗಲಿದ್ದಾರೆ.

ABOUT THE AUTHOR

...view details