ಕರ್ನಾಟಕ

karnataka

ETV Bharat / briefs

ಯುಟ್ಯೂಬ್​ನಿಂದ ಮೋದಿ ಬಯೋಪಿಕ್ ಟ್ರೇಲರ್​​ ನಾಪತ್ತೆ..! - ನವದೆಹಲಿ

ಮೋದಿ ಬಯೋಪಿಕ್​​ ಟ್ರೇಲರ್​​​ ಯಾವ ಕಾರಣದಿಂದ ಯುಟ್ಯೂಬ್​​ನಿಂದ ತೆಗೆಯಲಾಗಿದೆ ಎನ್ನುವುದು ಸ್ಪಷ್ಟವಾಗಿಲ್ಲ. ಈ ಕುರಿತಂತೆ ಚಿತ್ರತಂಡ ಸಹ ಯಾವುದೇ ಹೇಳಿಕೆ ನೀಡಿಲ್ಲ.

ಮೋದಿ ಬಯೋಪಿಕ್

By

Published : Apr 16, 2019, 5:40 PM IST

ನವದೆಹಲಿ:ಮೋದಿ ಬಯೋಪಿಕ್​​​ ಬಿಡುಗಡೆಯ ಹಗ್ಗಜಗ್ಗಾಟ ನಡೆಯುತ್ತಿರುವ ಮಧ್ಯೆ ಚಿತ್ರದ ಟ್ರೇಲರ್​​ ಯುಟ್ಯೂಬ್​​ನಿಂದ ನಾಪತ್ತೆಯಾಗಿದೆ.

ಮೋದಿ ಬಯೋಪಿಕ್​​ ಟ್ರೇಲರ್​​​ ಯಾವ ಕಾರಣದಿಂದ ಯುಟ್ಯೂಬ್​​ನಿಂದ ತೆಗೆಯಲಾಗಿದೆ ಎನ್ನುವುದು ಸ್ಪಷ್ಟವಾಗಿಲ್ಲ. ಈ ಕುರಿತಂತೆ ಚಿತ್ರತಂಡ ಸಹ ಯಾವುದೇ ಹೇಳಿಕೆ ನೀಡಿಲ್ಲ.

ಯುಟ್ಯೂಬ್​ನಲ್ಲಿ ಮೋದಿ ಬಯೋಪಿಕ್ ಎಂದು ಹುಡುಕಾಟ(ಸರ್ಚ್​) ಮಾಡಿದರೆ ಮೋದಿ ವೆಬ್​ ಸಿರೀಸ್​ ಟ್ರೇಲರ್​​ ಕಾಣಿಸುತ್ತದೆ.

ಯುಟ್ಯೂಬ್​​ನಲ್ಲಿ ಬಯೋಪಿಕ್​​ ಹುಡುಕಿದಾಗ ದೊರೆಯುವ ಫಲಿತಾಂಶ

ಮೋದಿ ಬಯೋಪಿಕ್ ವೀಕ್ಷಿಸಿ ನಿರ್ಧಾರ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್​ ಏಪ್ರಿಲ್ 15ರಂದು ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.

ಒಮಂಗ್ ಕುಮಾರ್​​​ ನಿರ್ದೇಶನದ ಮೋದಿ ಬಯೋಪಿಕ್​​​ನಲ್ಲಿ ವಿವೇಕ್ ಒಬೇರಾಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಏಪ್ರಿಲ್​​ 11ರಂದು ಬಿಡುಗಡೆಯಾಗಬೇಕಿತ್ತು.

ABOUT THE AUTHOR

...view details