ಕರ್ನಾಟಕ

karnataka

ETV Bharat / briefs

ಚಿಕ್ಕಬಳ್ಳಾಪುರದ ಕೊರೊನಾ ಟೋಲ್‌ಫ್ರೀ ಕಾರ್ಯಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ - PM Modi

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸ್ಥಾಪಿತವಾಗಿರುವ ಕೊರೊನಾ ಸಂಬಂಧಿತ ಟೋಲ್‌ಫ್ರೀ ಸಂಖ್ಯೆ 1077 ದೂರವಾಣಿ ಸಂಖ್ಯೆಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Chikkaballapur
Chikkaballapur

By

Published : May 18, 2021, 8:58 PM IST

Updated : May 18, 2021, 9:43 PM IST

ಚಿಕ್ಕಬಳ್ಳಾಪುರ:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೋವಿಡ್ ಸೋಂಕು ಹರಡುವಿಕೆಯ ನಿಯಂತ್ರಣ ಕುರಿತು ರಾಜ್ಯದ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ಈ ವೇಳೆ ಜಿಲ್ಲೆಯಲ್ಲಿ ಜಾರಿಗೆ ತಂದ 1077 ಕೊರೊನಾ ಟೋಲ್‌ಫ್ರೀ ಸಂಖ್ಯೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಇಂದು ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಸಂವಾದ ನಡೆಸಿದ್ದು, ಸ್ಥಳೀಯ ಮಟ್ಟದಲ್ಲಿ ಕೊರೊನಾ ನಿಯಂತ್ರಣ ಸೇರಿದಂತೆ, ಮುಂಜಾಗ್ರತಾ ಕ್ರಮಗಳ ಬಗ್ಗೆ ಸಲಹೆ ನೀಡಿದ್ದಾರೆ.

ಪ್ರಧಾನಿಯೊಂದಿಗಿನ ಸಂವಾದ ಕುರಿತು ಡಿಸಿ ಮಾಹಿತಿ

ಜಿಲ್ಲೆಯಲ್ಲಿ ಸ್ಥಾಪಿತವಾಗಿರುವ ಕೊರೊನಾ ಸಂಬಂಧಿತ ಟೋಲ್‌ಫ್ರೀ ಸಂಖ್ಯೆ 1077 ದೂರವಾಣಿ ಸಂಖ್ಯೆಗೆ ಪ್ರಧಾನಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು ಸಂತಸ ತಂದಿದೆ ಎಂದು ಜಿಲ್ಲಾಧಿಕಾರಿ ಆರ್​. ಲತಾ ಸಂತಸ ವ್ಯಕ್ತಪಡಿಸಿದ್ದಾರೆ.

ಟೋಲ್‌ಫ್ರೀ ಸಂಖ್ಯೆಯಿಂದ ಜಿಲ್ಲೆಯಲ್ಲಿ ಹೋಂ ಐಸೋಲೆಷನ್ ಆಗಿರುವವರಿಗೆ ಪ್ರತಿನಿತ್ಯ ಸಂಪರ್ಕಿಸಿ ವಿಚಾರಿಸುತ್ತಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಇದೇ ವೇಳೆ ತಿಳಿಸಿದರು.

Last Updated : May 18, 2021, 9:43 PM IST

ABOUT THE AUTHOR

...view details