ಕೋಲ್ಕತ್ತಾ: ಕಳೆದೆರಡು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ ಕೇದಾರನಾಥನ ಸನ್ನಿಧಿಯಲ್ಲಿ ಕಾಲ ಕಳೆಯುತ್ತಿದ್ದು, ಇದೇ ವಿಷಯವನ್ನಿಟ್ಟುಕೊಂಡು ತೃಣಮೂಲ ಕಾಂಗ್ರೆಸ್ ಇದೀಗ ಚುನಾವಣಾ ಆಯೋಗದ ಬಾಗಿಲು ತಟ್ಟಿದೆ.
ಮೋದಿ ಕೇದಾರ ಪ್ರವಾಸ ವೈರಲ್: ನೀತಿ ಸಂಹಿತೆ ಉಲ್ಲಂಘನೆ ಎಂದು ಆರೋಪಿಸಿ ಇಸಿ ಕದ ತಟ್ಟಿದ ಟಿಎಂಸಿ - ನೀತಿ ಸಂಹಿತೆ ಉಲ್ಲಂಘನೆ
ಕೊನೆಯ ಹಂತದ ಮತದಾನಕ್ಕಾಗಿ ಕಳೆದೆರಡು ದಿನಗಳ ಹಿಂದೆ ಚುನಾವಣಾ ಪ್ರಚಾರ ಅಂತ್ಯಗೊಂಡಿದ್ದು, ಇದರ ಮಧ್ಯೆ ಕೂಡ ಎಲ್ಲ ಮಾಧ್ಯಮಗಳು ಪ್ರಧಾನಿ ಮೋದಿ ಕೇದಾರನಾಥ ಯಾತ್ರೆಯ ವಿಷಯ ಬಿತ್ತರಿಸುತ್ತಿವೆ ಎಂದು ಆರೋಪಿಸಿದೆ.
ಪ್ರಧಾನಿ ಮೋದಿ
7ನೇ ಹಂತದ ಚುನಾವಣೆಗಾಗಿ ಬಹಿರಂಗ ಪ್ರಚಾರ ಮುಗಿದು ಎರಡು ದಿನ ಕಳೆದಿವೆ. ಇದರ ಮಧ್ಯೆ ಕೂಡ ಪ್ರಧಾನಿ ಮೋದಿ ಕೇದಾರನಾಥನ ಯಾತ್ರೆಯಲ್ಲಿದ್ದು, ಇದೇ ವಿಷಯವನ್ನ ಎಲ್ಲ ಮಾಧ್ಯಮಗಳು ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೇ ಪ್ರಸಾರ ಮಾಡುತ್ತಿವೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ಅದು ಆರೋಪ ಮಾಡಿದೆ. ಪ್ರಧಾನಿ ಮೋದಿ ಮಾಧ್ಯಮಗಳನ್ನ ತನ್ನತ್ತ ಸೆಳೆಯಲು ಈ ಗಿಮಿಕ್ ನಡೆಸಿದ್ದಾರೆಂದು ಹೇಳಿದೆ.
ನಿನ್ನೆ ಕೇದಾರನಾಥನಲ್ಲಿ ಕಾಲ ಕಳೆದಿದ್ದ ಮೋದಿ, ಇದೀಗ ಬದರೀನಾಥನ ಸನ್ನಿಧಿಗೂ ಆಗಮಿಸಿದ್ದಾರೆ. ಇದೇ ವಿಷಯವನ್ನಿಟ್ಟುಕೊಂಡು ಟಿಎಂಸಿ ಆಕ್ರೋಶ ವ್ಯಕ್ತಪಡಿಸಿದೆ.