ನಿಮ್ಮ ಡೆಸ್ಟಿನೇಷನ್ ಒಳ್ಳೆಯ ಸ್ಥಳದಲ್ಲಿರಲಿ:
ನಿಮ್ಮ ಡೆಸ್ಟಿನೇಷನ್ ನಿರ್ಧರಿಸುವ ಮೊದಲು, ನಿಮ್ಮಂತೆಯೇ ಪ್ರವಾಸ ಕೈಗೊಂಡ ಮಹಿಳೆಯರ ಜೊತೆ ಜಾಗದ ಬಗ್ಗೆ ಚರ್ಚಿಸಿ. ಏಕೆಂದರೆ ಎಲ್ಲಾ ಪ್ರದೇಶ ಹೆಣ್ಣುಮಕ್ಕಳು ಒಂಟಿಯಾಗಿ ತಿರುಗಾಡಲು ಸೇಫ್ ಅಲ್ಲ. ಜೊತೆಗೆ ನಿಮ್ಮ ಬಜೆಟ್‌ಗೆ ನೀವು ಅಯ್ದುಕೊಂಡ ಪ್ಲೇಸ್ ಸೂಕ್ತವಿದೆಯೇ ಎಂದು ಕೇಳಿ ತಿಳಿದುಕೊಳ್ಳಿ.
ಹೆಚ್ಚು ಲಗೇಜ್ ಬದಲು ಅಗತ್ಯ ಲಗೇಜ್‌ಗಳನ್ನು ಕೊಂಡೊಯ್ಯಿರಿ:
ಪ್ರವಾಸಗಳಿಗೆ ಹೊರಟಾಗ ಆದಷ್ಟು ನಿಮ್ಮ ಲಗೇಜ್ ಕಡಿಮೆ ಇರಲಿ. ಇದರಿಂದ ನಿಮಗೆ ಭಾರವಾದ ಲಗೇಜ್ ಸಂಭಾಳಿಸುವ ಗೋಜು ತಪ್ಪುತ್ತದೆ. ಲಗೇಜ್ ಕಡಿಮೆ ಇದ್ದಷ್ಟು ನೀವು ನಿರಾಳವಾಗಿ ನಿಮ್ಮ ಡೆಸ್ಟಿನೇಶನ್‌ನನ್ನು ಎಂಜಾಯ್ ಮಾಡಬಹುದು. ಆದರೆ ನೆನಪಿರಲಿ ನಿಮ್ಮ ಲಗೇಜ್‌ನಲ್ಲಿ ಪ್ರವಾಸಕ್ಕೆ ಅಗತ್ಯವಾಗಿರುವ ವಸ್ತುಗಳಿರಲಿ.
ನಿಮ್ಮ ಸುರಕ್ಷತೆಯ ಜವಾಬ್ದಾರಿ ನಿಮ್ಮದು:
ಒಂಟಿಯಾಗಿ ಹೊಸ ಊರುಗಳಿಗೆ ಹೋಗುವಾಗ ಆದಷ್ಟು ನಿಮ್ಮ ಸುರಕ್ಷತೆಯ ಕಡೆ ಗಮನವಿರಲಿ. ಯಾವುದೋ ಸಾಹಸ ಕಾರ್ಯ ಮಾಡುವ ಸಲುವಾಗಿ ನಿಮಗೆ ಪರಿಚಯವೇ ಇಲ್ಲದ ಸ್ಥಳಗಳಿಗೆ ಕತ್ತಲ ಸಮಯದಲ್ಲಿ ಹೋಗುವುದು ಸರಿ ಅಲ್ಲ. ಆದಷ್ಟು ಜನರು ಓಡಾಡುವ ಸ್ಥಳದಲ್ಲಿ ನೀವಿರಿ.
ಹೊಸ ಗೆಳೆಯರನ್ನು ಮಾಡಿಕೊಳ್ಳಿ:
ನಿಮ್ಮ ಹಾಗೆ ಹಲವಾರು ಜನ ಒಬ್ಬಂಟಿಯಾಗಿ ಅಥವಾ ಅವರ ಗೆಳೆಯರೊಂದಿಗೆ ಪ್ರವಾಸಕ್ಕೆ ಬಂದಿರುತ್ತಾರೆ. ಅಂತವರ ಪರಿಚಯ ಮಾಡಿಕೊಳ್ಳಿ. ಆಗ ಹೊಸ ಊರಿನ ಬಗ್ಗೆ, ಪ್ರದೇಶಗಳ ಬಗ್ಗೆ ಹೆಚ್ಚು ಮಾಹಿತಿ ಸಿಗುತ್ತದೆ. ನಿಮ್ಮ ಮುಂದಿನ ಟ್ರಾವೆಲ್ ಪ್ಲಾನ್‌ಗೂ ಈ ಪರಿಚಯ ಉಪಯೋಗವಾಗುತ್ತದೆ.
ನಿಮ್ಮ ಸುರಕ್ಷತೆಗೆ ಪೂರಕವಾಗುವ ಉಪಕರಣಗಳು ನಿಮ್ಮ ಕೈಗೆ ಸಿಗುವಂತಿರಲಿ:
ಒಬ್ಬಂಟಿಯಾಗಿ ಹೊಸ ಜಾಗಗಳಿಗೆ ಹೋಗುವಾಗ ರಕ್ಷಣಾತ್ಮಕ ವಸ್ತುಗಳನ್ನು ಕೊಂಡೊಯ್ಯುವುದು ಉತ್ತಮ. ಯಾವುದೋ ಘಳಿಗೆಯಲ್ಲಿ ಅವು ನಿಮ್ಮ ಸುರಕ್ಷತೆಗೆ ಸಹಾಯವಾಗುತ್ತವೆ. ಆದರೆ ಅಂತಹ ವಸ್ತುಗಳನ್ನು ಸದಾ ನಿಮ್ಮಲ್ಲಿಯೇ, ನಿಮ್ಮ ಕೈಗೆಟಕುವಂತೆ ಇಟ್ಟುಕೊಳ್ಳಿ.
ನಿಮ್ಮ ಪ್ರವಾಸದಲ್ಲಿ ಏನೇನು ಮಾಡಬೇಕೆಂಬುದನ್ನು ಲಿಸ್ಟ್ ಮಾಡಿ:
ನೀವು ಹೋಗುವ ಪ್ರದೇಶದ ಬಗ್ಗೆ ತಿಳಿದುಕೊಂಡು, ಅಲ್ಲಿ ನೀವು ಯಾವೆಲ್ಲ ಜಾಗಕ್ಕೆ ವಿಸಿಟ್ ಮಾಡಲು ಇಷ್ಟ ಪಡುತ್ತಿರಾ? ನಿಮ್ಮ ಶಾಪಿಂಗ್ ಪ್ಲಾನ್ ಏನು, ಯಾವ ಹೋಟೆಲ್‌ನಲ್ಲಿ ಊಟ ಮಾಡಲು ಇಚ್ಛಿಸುತ್ತೀರಾ ಎಲ್ಲವನ್ನು ಮೊದಲೇ ನಿರ್ಧರಿಸಿ. ಇದು ನಿಮ್ಮ ಪ್ರವಾಸ ಯಾವುದೆ ಚಿಂತೆಯಿಲ್ಲದೇ ಎಂಜಾಯ್ ಮಾಡಲು ಸಹಾಯವಾಗುತ್ತದೆ.
ನಿಮ್ಮ ಮೊದಲ ಪ್ರವಾಸಕ್ಕೆ ಈ ಟಿಪ್ಸ್‌ಗಳು ಸಹಕಾರಿಯಾಗುತ್ತವೆ. ಜೊತೆಗೆ ನಿಮ್ಮ ಟ್ರಾವೆಲ್ ಅನ್ನು ಸದಾ ನೆನಪಲ್ಲಿಡುವಂತೆ ಮಾಡುತ್ತದೆ.