ಹೈದರಾಬಾದ್:ನಮ್ಮ ಕೈಯಲ್ಲಿ ಆಗುವುದಿಲ್ಲ ಎಂದು ಕೈಕಟ್ಟಿ ಕುಳಿತುಕೊಂಡರೆ ಯಾವುದೇ ಕೆಲಸವೂ ಆಗುವುದಿಲ್ಲ. ಅದೇ ನನ್ನಿಂದ ಆಗುವುದು ಎಂದು ಅಂದುಕೊಂಡರೆ ಸಾಕು ಎಂತಹ ಕೆಲಸವನ್ನಾದ್ರೂ ಕ್ಷಣಾರ್ಧದಲ್ಲಿ ಮಾಡಬಹುದು. ಇಲ್ಲೊಬ್ಬ ವಿಶೇಷ ಚೇತನ ವ್ಯಕ್ತಿ ಕೂಡ ಎಲ್ಲರಿಗೂ ಸ್ಪೂರ್ತಿಯಾಗುವಂತಹ ಕೆಲಸ ಮಾಡುತ್ತಿದ್ದಾನೆ.
ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ವಿಶೇಷ ಚೇತನ ವ್ಯಕ್ತಿಯೊಬ್ಬ ಜೊಮ್ಯಾಟೋ ಟೀ ಶರ್ಟ್ ಧರಿಸಿ ಮೂರು ಚಕ್ರವಿರುವ ಸೈಕಲ್ನಲ್ಲಿ ಕುಳಿತುಕೊಂಡು ಫುಡ್ ಸಪ್ಲೈ ಮಾಡುತ್ತಿದ್ದಾನೆ.
ಜೊಮ್ಯಾಟೋ ಫುಡ್ ಆರ್ಡರ್ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ ಈ ಹನಿ ಗೋಯಲ್ ಇತರರಿಗೂ ಮಾದರಿಯಾಗಿದ್ದಾನೆ. ತನಗೆ ಸಿಗುವ ಡೆಲಿವರಿಗಳ ಸ್ಥಳಗಳಿಗೆ ಖುದ್ದಾಗಿ ಮೂರು ಗಾಲಿ ಸೈಕಲ್ನಲ್ಲಿ ತೆರಳಿ ಫುಡ್ ನೀಡುತ್ತಿದ್ದಾನೆ. ಇದರ ವಿಡಿಯೋ ಸೆರೆ ಹಿಡಿದಿರುವ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದು, ಅದು ಸಿಕ್ಕಾಪಟ್ಟಿ ವೈರಲ್ ಆಗುತ್ತಿದೆ.
ಇನ್ನು ವಿಶೇಷ ಚೇತನ ವ್ಯಕ್ತಿಗೆ ಕೆಲಸ ನೀಡಿರುವ ಜೊಮ್ಯಾಟೋ ಕಂಪನಿಗೂ ಕೂಡ ಅನೇಕರು ಶಹಬ್ಬಾಸ್ಗಿರಿ ನೀಡಿದ್ದಾರೆ. ಮೂಲತಃ ಈ ವ್ಯಕ್ತಿ ರಾಜಸ್ಥಾನದವನು ಎಂದು ತಿಳಿದು ಬಂದಿದ್ದರೂ ಇಲ್ಲಿಯವರೆಗೆ ಅದರ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ.