ಮಂಡ್ಯ: ಮಾಧ್ಯಮಗಳ ಮೇಲಿನ ಸಿಎಂ ಮುನಿಸು ಹಾಗೇ ಮುಂದುವರೆದಿದೆ. ಮಾಧ್ಯಮ ಅಂದ್ರೇ ಸಾಕು ಈಗೀಗ ಮುಖ್ಯಮಂತ್ರಿಗಳು ಮಾರುದೂರವೇ ಉಳಿಯುತ್ತಿದ್ದಾರೆ. ಮೇ23ರವರೆಗೂ ಮಾಧ್ಯಮಗಳ ಮೇಲಿನ ಮುನಿಸು ಕರಗುವ ಸಾಧ್ಯತೆ ಇಲ್ಲ ಎಂದೆನಿಸುತ್ತಿದೆ.
ಈಗೇನ್ ಮಾತಾಡಲ್ಲ, ಮೇ23ಕ್ಕೆ ಮಾತಾಡೋಣ.. ಮಂಡ್ಯದಲ್ಲಿ ಮಾಧ್ಯಮದವರಿಂದ ಸಿಎಂ ದೂರ! - Mandya_cm
ಮಾಧ್ಯಮದವರನ್ನು ಮಾತನಾಡಿಸಲು ಸಿಎಂ ಕುಮಾರಸ್ವಾಮಿ ಸಿದ್ಧರಿಲ್ಲ. ಮೇ 23ಕ್ಕೆ ಲೋಕಸಭಾ ಫಲಿತಾಂಶ ಬಂದ ನಂತರ ಮಾತನಾಡುತ್ತೇನೆ ಎಂದು ಹೇಳಿದರು.
![ಈಗೇನ್ ಮಾತಾಡಲ್ಲ, ಮೇ23ಕ್ಕೆ ಮಾತಾಡೋಣ.. ಮಂಡ್ಯದಲ್ಲಿ ಮಾಧ್ಯಮದವರಿಂದ ಸಿಎಂ ದೂರ!](https://etvbharatimages.akamaized.net/etvbharat/prod-images/768-512-3261373-thumbnail-3x2-mnd.jpg)
ಸಿ.ಎಂ.ಕುಮಾರಸ್ವಾಮಿ
ಸಿ.ಎಂ.ಕುಮಾರಸ್ವಾಮಿ ಮಾಧ್ಯಮದವರ ಮುಂದೆ ಮಾತನಾಡದೇ ಹೋದರು.
ಖಾಸಗಿ ಕಾರ್ಯಕ್ರಮ ನಿಮಿತ್ತ ಇವತ್ತು ಮಡಿಕೇರಿಯ ಇಬ್ಬನಿ ರೆಸಾರ್ಟ್‌ನಿಂದ ಸೀದಾ ಮಂಡ್ಯದ ಮದ್ದೂರಿಗೆ ಆಗಮಿಸಿದ್ದ ಮುಖ್ಯಮಂತ್ರಿಗಳನ್ನ ಸಹಜವಾಗಿಯೇ ಮಾಧ್ಯಮದ ಪ್ರತಿನಿಧಿಗಳು ಮಾತನಾಡಿಸಲು ಮುಂದಾಗಿದ್ದರು. ಆದರೆ, ಇವತ್ತೂ ಕೂಡ ಮಾಧ್ಯಮಗಳಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅಂತರ ಕಾಯ್ದುಕೊಂಡರು. ಸರ್ ಮಾತಾಡೋದಿಲ್ವಾ ಅಂತಾ ಪತ್ರಕರ್ತರೊಬ್ಬರು ಕೇಳಿಯೇ ಬಿಟ್ಟರು. ಆದರೆ, ಸಿಎಂ ಮಾತ್ರ ಇಲ್ಲ ಇಲ್ಲ ಮೇ 23ಕ್ಕೆ ಎಲ್ಲ ಕೂತ್ಕೊಂಡು ಮಾತಾಡೋಣ ಅಂತಾ ಹೇಳಿ ಕಾರು ಏರಿಯೇ ಬಿಟ್ಟರು.
TAGGED:
Mandya_cm