ರಾಯಚೂರು: ಬಿಸಿಲ ನಾಡು ರಾಯಚೂರಿನಲ್ಲಿ ಬಿರು ಬಿಸಿಲಿನ ಬೇಗೆಗೆ ಜನ ತ್ತತರಿಸಿದ್ದು, ಬೇಸಿಗೆ ಅರಂಭದಲ್ಲೇ ಅತಿ ಹೆಚ್ಚು ಶೇಕಡಾ. 40 ಡಿಗ್ರಿ ಉಷ್ಣಾಂಶವಿದೆ ದಾಖಲಾಗುತ್ತಿದೆ.
ಬಿಸಿಲಿನ ತಾಪಕ್ಕೆ ನದಿ,ಕೆರೆ,ಹಳ್ಳ ಕೊಳ್ಳಗಳು ಬತ್ತು ಹೋಗುತ್ತಿದ್ದು, ಗಿಡ-ಮರಗಳು ಒಣಗುತ್ತಿವೆ. ಬಿಸಿಲಿನ ಕಾವಿಗೆ ಪ್ರಾಣಿ-ಪಕ್ಷಿಗಳು ಕುಡಿಯಲು ನಿರಿಲ್ಲದೇ ತತ್ತರಿಸುತ್ತಿವೆ.
ಯರಗೇರಾ ಪಿಜಿ ವಿದ್ಯಾರ್ಥಿಗಳು ಪ್ರಾಣಿ ಪಕ್ಷಗಳು ನೀರಿಗಾಗಿ ಪಡುತ್ತಿರುವ ನರಳಾಟವನ್ನು ನೋಡಲಾರದೆ ರಾಯಚೂರು ತಾಲೂಕಿನ ಯರಗೇರಾ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ಕ್ಯಾಂಪಸ್ನಲ್ಲಿ ನೀರಿನ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ಯರಗೇರಾ ಪಿಜಿ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಮರಗಿಡಗಳ ಟೂಂಗೆಗಳಲ್ಲಿ ಮಡಿಕೆಯ ಮುಚ್ಚುಳಿಕೆ ,ಕತ್ತರಿಸಿದ ಪ್ಲಾಸ್ಟಿಕ್ ಬಾಟಲ್ಗಳನ್ನು ನೇತು ಹಾಕಿ ಪಕ್ಷಿಗಳಿಗೆ ನೀರುಣಿಸುವ ಮೂಲಕ ಸಾಮಾಜಿಕ ಕಾರ್ಯಕ್ಕೆ ಮುಂದಾಗಿದ್ದಾರೆ.
ಸದರಿ ಕೇಂದ್ರದ ಎಂ.ಕಾಂ, ಇತಿಹಾಸ ವಿಭಾಗ ಹಾಗೂ ಮತ್ತಿತರೆ ವಿಭಾಗದ ವಿದ್ಯಾರ್ಥಿಗಳು ಪಕ್ಷಗಳ ಕಾಳಜಿ ವಹಿಸುತ್ತಿದ್ದಾರೆ.