ಅಥಣಿ :ಪಟ್ಟಣದಲ್ಲಿ ಕೂಲಿಕಾರ್ಮಿಕರಿಗೆ ನಿರ್ಗತಿಕರಿಗೆ ಮತ್ತು ಬಡವರಿಗೆ ದಾನಿಗಳು ಆಹಾರ ವಿತರಣೆಗೆ ಹೋದಾಗ ಮಗುವೊಂದು ಹಸಿವು ತಾಳದೇ ಓಡೋಡಿ ಬಂದು ಊಟ ತೆಗೆದುಕೊಂಡಾಗ ದಾನಿಗಳು ಕಣ್ಣೀರಿಟ್ಟ ಮನಕಲಕುವ ಘಟನೆ ನಡೆದಿದೆ.
ದಾನಿಗಳು ಊಟ ತಂದಾಗ ಓಡೋಡಿ ಬಂದ ಬಾಲಕಿ.. ಕಣ್ಣೀರಿಟ್ಟ ದಾನಿಗಳು: ವಿಡಿಯೋ - people providing food for poor people
ಪಟ್ಟಣದ ಅಗ್ನಿಶಾಮಕ ಠಾಣೆಗೆ ಹೊಂದಿಕೊಂಡಿರುವ ಗುಡಿಸಲುಗಳಲ್ಲಿ ಹಾವಾಡಿಗರು ಮತ್ತು ಇತರೇ ಸಮುದಾಯದ ಅಲೆಮಾರಿ ಜನರು ವಾಸಿಸುತ್ತಿದ್ದಾರೆ. ದಾನಿಗಳು ಊಟ ತಂದಾಗ ಅನ್ನ ಕಂಡು ಮುಗಿಬಿದ್ದು ಸ್ವೀಕರಿಸುತ್ತಿದ್ದ ಮನಕಲಕುವ ಘಟನೆ ನಡೆದಿದೆ.
ಪಟ್ಟಣದ ಅಗ್ನಿಶಾಮಕ ಠಾಣೆಗೆ ಹೊಂದಿಕೊಂಡಿರುವ ಗುಡಿಸಲುಗಳಲ್ಲಿ ಹಾವಾಡಿಗರು ಮತ್ತು ಇತರೇ ಸಮುದಾಯದ ಅಲೆಮಾರಿ ಜನರು ವಾಸಿಸುತ್ತಿದ್ದು ದಾನಿಗಳು ಊಟ ತಂದಾಗ ಅನ್ನ ಕಂಡು ಮುಗಿಬಿದ್ದು ಸ್ವೀಕರಿಸುತ್ತಿದ್ದ ಮನಕಲಕುವ ದೃಶ್ಯ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿತ್ತು.
ಇಲ್ಲಿನ ತಾಲೂಕುಆಸ್ಪತ್ರೆಯಲ್ಲಿ ರಾತ್ರಿ ಹೊತ್ತು ರೋಗಿಗಳಿಗೆ, ಬಾಣಂತಿಯರಿಗೆ ಮತ್ತು ಅವರ ಪೋಷಕರಿಗೆ ಊಟ ತಲುಪಿಸುವ ಶಾಂತಾಭಾಯಿ ಯಕ್ಕುಂಡಿ ಮತ್ತು ಕುಟುಂಬ ಸದಸ್ಯರು ನಿತ್ಯವೂ ಎರಡು ನೂರಕ್ಕು ಹೆಚ್ಚು ಜನರಿಗೆ ಮಧ್ಯಾಹ್ನ ಮತ್ತು ರಾತ್ರಿ ವೇಳೆ ಉಚಿತವಾಗಿ ಊಟ ಕೊಟ್ಟು, ಧಣಿದವರ ಹಸಿವು ನೀಗಿಸುತ್ತಿದ್ದಾರೆ.