ಹಾವೇರಿ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನರು ಲಸಿಕೆ ಹಾಕಿಸಿಕೊಳ್ಳಲು ಲಸಿಕಾ ಕೇಂದ್ರಗಳತ್ತ ಮುಖಮಾಡುತ್ತಿದ್ದಾರೆ. ಆದರೆ ಜಿಲ್ಲಾ ಕೇಂದ್ರ ಹಾವೇರಿ ಸೇರಿದಂತೆ ವಿವಿದೆಡೆ ಕಾರ್ಯನಿರ್ವಹಿಸುತ್ತಿದ್ದ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಇಲ್ಲ. ಲಸಿಕಾ ಕೇಂದ್ರಗಳ ಮುಂದೆ ಸರ್ಕಾರದ ಆದೇಶ ಬರುವರೆಗೆ ಲಸಿಕೆ ಹಾಕುವುದನ್ನ ಬಂದ್ ಮಾಡಲಾಗಿದೆ ಎಂದು ನೋಟೀಸ್ ಅಂಟಿಸಲಾಗಿದೆ.
ಹಾವೇರಿಯಲ್ಲಿ ಲಸಿಕೆ ಖಾಲಿ: ಸಾರ್ವಜನಿಕರ ಆಕ್ರೋಶ - Haveri latest News
ಹಾವೇರಿ ಸೇರಿದಂತೆ ವಿವಿಧೆಡೆ ಕಾರ್ಯನಿರ್ವಹಿಸುತ್ತಿದ್ದ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಇಲ್ಲ. ಲಸಿಕಾ ಕೇಂದ್ರಗಳ ಮುಂದೆ ಸರ್ಕಾರದ ಆದೇಶ ಬರುವರೆಗೆ ಲಸಿಕೆ ಹಾಕುವುದನ್ನ ಬಂದ್ ಮಾಡಲಾಗಿದೆ ಎಂದು ನೋಟೀಸ್ ಅಂಟಿಸಲಾಗಿದೆ.
haveri
ಹಾವೇರಿಯಲ್ಲಿದ್ದ ಏಕೈಕ ಲಸಿಕಾ ಕೇಂದ್ರದ ಮುಂದೆ ಸರ್ಕಾರದ ಆದೇಶದಂತೆ ಲಸಿಕಾ ಕೇಂದ್ರ ಬಂದ್ ಮಾಡಲಾಗಿದೆ. ಜನರ ಜೀವದ ಜೊತೆ ಅಧಿಕಾರಿಗಳು ಮತ್ತು ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಸಲ ಲಸಿಕೆ ಸಾಕಷ್ಟು ಪ್ರಮಾಣದಲ್ಲಿದೆ ಎಂದು ಹೇಳುತ್ತಾರೆ. ಆದರೆ, ಸ್ಥಳಕ್ಕೆ ಬಂದರೆ ಲಸಿಕೆ ಇರುವದಿಲ್ಲ. ಇನ್ನೊಂದು ಬಾರಿ ಕೇವಲ ಎರಡನೇ ಡೋಸ್ನವರಿಗೆ ಮಾತ್ರ ಎನ್ನುತ್ತಾರೆ. ಆದರೆ ಪ್ರಥಮ ಬಾರಿಗೆ ಬಂದವರಿಗೆ ಮೊದಲನೆ ಡೋಸ್ ಹಾಕುತ್ತಾರೆ ಎಂದು ಲಸಿಕೆ ಹಾಕಲು ಬಂದ ಜನ ಆರೋಪಿಸಿದ್ದಾರೆ.