ಗದಗ :ಕೊರೊನಾ ಹಿನ್ನೆಲೆಯಲ್ಲಿ ಗದಗನಲ್ಲಿ ನಾಟಿ ಕೋಳಿಗೆ ಭಾರೀ ಡಿಮ್ಯಾಂಡ್ ಬಂದಿದೆ. ಕೊರೊನಾ ಸೋಂಕಿತರು ನಾಟಿ ಕೋಳಿ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ ಅಂತ ವೈದ್ಯರು ಸೂಚಿಸಿರುವ ಹಿನ್ನೆಲೆ ನಾಟಿ ಕೋಳಿಗೆ ಭಾರೀ ಬೇಡಿಕೆ ಬಂದಿದೆ.
ಜಿಲ್ಲೆಯ ರೋಣ ಪಟ್ಟಣದಲ್ಲಿ ನಾಟಿ ಕೋಳಿ ಹಿಡಿದು ಹಳ್ಳಿಗಳಿಂದ ಬೆಳ್ಳಂಬೆಳಗ್ಗೆ ಪಟ್ಟಣಕ್ಕೆ ಮಾರಾಟಗಾರರು ಬರ್ತಿದ್ದಾರೆ. ಬೆಳಗ್ಗೆ 6 ರಿಂದ 10 ಗಂಟೆ ಒಳಗೆ ಮಾರಾಟ ಮಾಡಿ ಹೋಗುವುದು ಸಾಮಾನ್ಯವಾಗಿದೆ. 8 ಗಂಟೆ ಒಳಗೆ ಎಲ್ಲಾ ಕೋಳಿಗಳು ಚೌಕಾಸಿ ಇಲ್ಲದೆ ಮಾರಾಟವಾಗ್ತಿವೆ ಅಂತ ವ್ಯಾಪಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.