ಕರ್ನಾಟಕ

karnataka

ETV Bharat / briefs

ಕೊಪ್ಪಳದಲ್ಲಿ ಶಿಶು ತಜ್ಞರ ಕೊರತೆ: ಶೀಘ್ರ ನಿಯೋಜನೆಯಾಗುವ ಭರವಸೆ ನೀಡಿದ ಡಿಹೆಚ್​​ಒ

ಕೊಪ್ಪಳ ಜಿಲ್ಲೆಗೆ 12 ಚಿಕ್ಕ ಮಕ್ಕಳ ತಜ್ಞರ ಅವಶ್ಯಕತೆ ಇದ್ದು, ಕೇವಲ ಒಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಜ್ಞರನ್ನು ನೇಮಕ ಮಾಡಲು ಸರ್ಕಾರ ಮುಂದಾಗಬೇಕಿದೆ.

pediatrician shortage in Koppal
pediatrician shortage in Koppal

By

Published : Jun 2, 2021, 11:41 AM IST

ಕೊಪ್ಪಳ: ಜಿಲ್ಲೆಯಲ್ಲಿ ಈಗ ಕೇವಲ ಒಬ್ಬರೇ ಚಿಕ್ಕ ಮಕ್ಕಳ ತಜ್ಞರಿದ್ದು, ಇನ್ನೂ 11 ತಜ್ಞರ ಅವಶ್ಯಕತೆಯಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು, ಸರ್ಕಾರ ಈಗಾಗಲೇ ವಿವಿಧ ವಿಭಾಗದ 47 ವೈದ್ಯರನ್ನು ಜಿಲ್ಲೆಗೆ ನೇಮಕ ಮಾಡಿದೆ ಎಂದಿದ್ದಾರೆ.

ಪ್ರಸ್ತುತ ಕೊರೊನಾ ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸುತ್ತಿದ್ದೇವೆ. ಮೂರನೇ ಅಲೆ ಮಕ್ಕಳನ್ನು ಬಾಧಿಸಲಿದೆ ಎಂಬ ತಜ್ಞರ ವರದಿ ಹಿನ್ನೆಲೆಯಲ್ಲಿ ನಾವು ವೈಜ್ಞಾನಿಕವಾಗಿ ಕಾರಣ ಹೇಳಲು ಆಗುವುದಿಲ್ಲ. ಆದರೆ ಸಾಧ್ಯತೆಯ ಮೂರನೇ ಅಲೆಯನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ‌.

ಜಿಲ್ಲೆಗೆ 12 ಚಿಕ್ಕ ಮಕ್ಕಳ ತಜ್ಞರ ಅವಶ್ಯಕತೆ ಇದೆ. ಜಿಲ್ಲೆಯಲ್ಲಿ ಸದ್ಯ ಕೇವಲ ಒಬ್ಬರು ಮಕ್ಕಳ ತಜ್ಞರಿದ್ದಾರೆ. ಚಿಕ್ಕ ಮಕ್ಕಳ‌ ತಜ್ಞರ 11 ಹುದ್ದೆಗಳು ಖಾಲಿ ಇವೆ. ಸರ್ಕಾರ ಈ ಕೊರತೆಯನ್ನು ನೀಗಿಸುತ್ತದೆ. ಗಂಗಾವತಿಗೆ ಹೊಸದಾಗಿ ಚಿಕ್ಕ ಮಕ್ಕಳ ತಜ್ಞರನ್ನು ನೀಡಿದ್ದಾರೆ. ಇನ್ನುಳಿದಂತೆ ಯಲಬುರ್ಗಾ, ಕುಷ್ಟಗಿಗೂ ಕೊಡಬಹುದು. ಮೂರನೇ ಅಲೆ ಬರುತ್ತೋ ಇಲ್ಲವೋ ಎನ್ನುವುದಕ್ಕೆ ವೈಜ್ಞಾನಿಕ ಕಾರಣ ಕೊಡಲು ಆಗುವುದಿಲ್ಲ. ಮೂರನೇ ಅಲೆ ಅಮೆರಿಕ ಸೇರಿ ವಿದೇಶಗಳಲ್ಲಿ ಕಂಡು ಬಂದಿದೆ. ವಿದೇಶದಲ್ಲಿನ ಅಲೆ ನೋಡಿಕೊಂಡು‌ ನಾವು ಸಿದ್ಧತೆ ಮಾಡುತ್ತಿದ್ದೇವೆ. ಮೂರನೇ ಅಲೆ ಮಕ್ಕಳನ್ನು ಬಾಧಿಸಬಹುದು ಎಂದು ತಜ್ಞರ ವರದಿ ಇದೆ. ಆ ಹಿನ್ನೆಲೆಯಲ್ಲಿ ನಮ್ಮ ಜಿಲ್ಲಾಡಳಿತ ಸಜ್ಜಾಗಿದೆ.

50 ಚಿಕ್ಕ ಮಕ್ಕಳ ವೆಂಟಿಲೇಟರ್ ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ. ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂದು ಡಿಹೆಚ್​ಒ ಡಾ. ಲಿಂಗರಾಜು ಹೇಳಿದ್ದಾರೆ.

ABOUT THE AUTHOR

...view details