ಚಿಕ್ಕಬಳ್ಳಾಪುರ: ಕೈ, ಕಾಲು ನೋವು ಎಂದು ಆಸ್ಪತ್ರೆಗೆ ಬಂದ ರೋಗಿಗಳಿಗೆ ವೈದ್ಯರ ಯಡವಟ್ಟಿನಿಂದ ಶಸ್ತ್ರಚಿಕಿತ್ಸೆಗೊಳಗಾದ ಘಟನೆ ಜಿಲ್ಲೆಯ ಗೌರಿಬಿದನೂರಿನ ಹೊಸೂರು ಆರೋಗ್ಯ ಕೇಂದ್ರದಲ್ಲಿ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ವ್ಯದ್ಯೆ ಯಡವಟ್ಟಿನಿಂದ ಶಸ್ತ್ರ ಚಿಕತ್ಸೆಗೆ ಒಳಗಾದ ರೋಗಿಗಳು ಒಂದು ತಿಂಗಳ ಹಿಂದೆ ಅಂಗಾಗಳ ನೋವು ಹಾಗೂ ಜ್ವರದಿಂದ ಬಳಲುತ್ತಿರುವವರು ಪ್ರಾರ್ಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಅರುಂಧತಿ ರಾಜೇಶ್ ಅವರಿಂದ ಚುಚ್ಚು ಮದ್ದು ತೆಗೆದುಕೊಂಡು ಹೋಗಿದ್ದರು. ಹೀಗೆ ಚಿಕಿತ್ಸೆಗೆ ತೆಗೆದುಕೊಂಡ ಆರಕ್ಕಿಂತ ಹೆಚ್ಚಿನ ರೋಗಿಗಳು ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರಂತೆ.
ವ್ಯದ್ಯೆ ಯಡವಟ್ಟಿನಿಂದ ಶಸ್ತ್ರ ಚಿಕತ್ಸೆಗೆ ಒಳಗಾದ ರೋಗಿಗಳು ಇವರಲ್ಲಿ ಬಶೆಟ್ಟಹಳ್ಳಿ ಗ್ರಾಮದ ನಿವಾಸಿ ಅಶ್ವತ್ಥಪ್ಪ ಕೂಡ ಒಬ್ಬರು. ಚುಚ್ಚು ಮದ್ದು ನೀಡಿದ ಭಾಗದಲ್ಲಿ ಸಂಪೂರ್ಣ ಸುಟ್ಟ ರೀತಿಯಾಗಿದೆ. ಆ ಭಾಗದಲ್ಲಿ ಕುಳಿತುಕೊಳ್ಳಲು ಆಗದ ಸ್ಥಿತಿ ಎದುರಾಗಿದೆ. ಆ ನೋವಿನಿಂದ ನಿಂತುಕೊಳ್ಳಲು ಸಾಧ್ಯವಾಗದ ರೀತಿ ದುಷ್ಪರಿಣಾಮ ಬೀರಿದೆ. ಇದೇ ಗ್ರಾಮದ ಸುಮಾರು 6 ರೋಗಿಗಳಿಗಿಂತ ಹೆಚ್ಚಿನವರಿಗೆ ಈ ಪರಿಸ್ಥಿತಿ ಬಂದಿದೆ. ಇದಕ್ಕೆ ವೈದ್ಯರ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ದೂರಿದರು.
ಡಾ.ಅರುಂಧತಿ ರಾಜೇಶ್ ನೀಡಿದ ಚಿಕಿತ್ಸೆಯಿಂದ ರೋಗಿಗಳು ನರಳಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಬಡ ರೋಗಿಗಳಿಗೆ ಸಂಕಷ್ಟ ತಲೆದೂರಿದೆ. ಖಾಸಗಿ ಆಸ್ಪತ್ರೆಯ ಬಿಲ್ ಕಟ್ಟಲು ಆಗದೇ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ ಅಂದಾಜು 2 ಲಕ್ಷ ರೂ. ಶಸ್ತ್ರ ಚಿಕಿತ್ಸೆಗೆ ಖರ್ಚಾಗಿದೆ ಎಂದು ಅಶ್ವತಪ್ಪನವರ ಮಗ ರವಿ ಆಸ್ಪತ್ರೆಯ ಬಳಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.