ಜೈಪುರ್: 12ನೇ ಆವೃತ್ತಿಯಲ್ಲಿ ಚೊಚ್ಚಲ ಗೆಲುವಿಗಾಗಿ ಹೋರಾಡುತ್ತಿರುವ ಆರ್ಸಿಬಿ ರಾಯಲ್ಸ್ನಲ್ಲಿರುವ ಕನ್ನಡಿಗ ಶ್ರೇಯಸ್ ಗೋಪಾಲ್ ದಾಳಿಗೆ ಸಿಲುಕಿ 158 ರನ್ಗೆ ತನ್ನ ಇನಿಂಗ್ಸ್ ಪೂರ್ಣಗೊಳಿಸಿದೆ.
ಉತ್ತಮ ಆರಂಭ ಪಡೆದ ಆರ್ಸಿಬಿ ಪವರ್ ಪ್ಲೇನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 48 ರನ್ಗಳಿಸಿತು. ಈ ಹಂತದಲ್ಲಿ ದಾಳಿಗಿಳಿದ ಕನ್ನಡಿಗ ಗೋಪಾಲ್ 23 ರನ್ಗಳಿಸಿದ್ದ ಕೊಹ್ಲಿಯನ್ನು ಬೌಲ್ಡ್ ಮಾಡಿದರು. ನಂತರ ಬಂದ ಎಬಿ ಡಿ(13)ಯನ್ನು ತಮ್ಮ 2ನೇ ಓವರ್ನಲ್ಲಿ ಕ್ಯಾಚ್ ಅಂಡ್ ಬೌಲ್ಡ್ ಮೂಲಕ ಪೆವಿಲಿಯನ್ ದಾರಿ ತೋರಿಸಿದರು. ಎಬಿಡಿ ಬೆನ್ನಲ್ಲೇ ಹೆಟ್ಮೈರ್ 9 ಬಾಲ್ಗಳಲ್ಲಿ 1 ರನ್ಗಳಿಸಿ ಗೋಪಾಲ್ರ 3 ನೇ ಓವರ್ನಲ್ಲಿ ಬಟ್ಲರ್ಗೆ ಕ್ಯಾಚ್ ನೀಡಿ ಹೊರ ನಡೆದರು.