ನವದೆಹಲಿ: ಭಾರತದ ಮಾಜಿ ನಾಯಕರಾದ ದಿಲೀಪ್ ವೆಂಗ್ಸರ್ಕರ್ ಹಾಗೂ ಮೊಹಮ್ಮದ್ ಅಜರುದ್ದೀನ್ ವಿಶ್ವಕಪ್ ತಂಡದಲ್ಲಿ ಪಂತ್ ಕೈಬಿಟ್ಟಿದ್ದನ್ನು ಪ್ರಶ್ನಿಸಿದ್ದಾರೆ.
ಇಂಗ್ಲೆಂಡ್ನಲ್ಲಿ ನಡೆಯುವ 12ನೇ ವಿಶ್ವಕಪ್ಗೆ ಯುವ ಸ್ಫೋಟಕ ಆಟಗಾರ ಪಂತ್ ವಿಶ್ವಕಪ್ ತಂಡದಲ್ಲಿ ಇರಬೇಕಿತ್ತು ಎಂದು ಈ ಇಬ್ಬರು ಮಾಜಿ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.
ಭಾರತದ ಮಾಜಿ ಆಯ್ಕೆ ಸಮಿತಿಯ ಅಧ್ಯಕ್ಷ ಆಗಿರುವ ದಿಲೀಪ್ ವೆಂಗ್ ಸರ್ಕರ್ ಪಂತ್ ಅವರಿಗೆ ತಂಡದಲ್ಲಿ ಆಡುವ ಸ್ಥಾನವಿದ್ದರು, ಕೇವಲ ವಿಕೆಟ್ ಕೀಪಿಂಗ್ಗಾಗಿ ಕಾರ್ತಿಕ್ರನ್ನು ಆಯ್ಕೆಮಾಡಲಾಗಿದೆ. ಇದು ಎಂಎಸ್ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಯ ಅನಾನುಭವವನ್ನು ತೋರಿಸಿಕೊಟ್ಟಿದೆ. ಪಂತ್ ಉತ್ತಮ ಟ್ಯಾಲೆಂಟ್ ಇರುವ ಆಟಗಾರ, ಐಪಿಎಲ್ನಲ್ಲೂ ಸ್ಫೋಟಕ ಇನಿಂಗ್ಸ್ ಆಡಿ ದೇಶದ ಗಮನ ಸೆಳೆದಿದ್ದಾರೆ. ಆದರೆ ಕೇವಲ ಕೀಪಿಂಗ್ ಕೌಶಲ್ಯದಲ್ಲಿ ಹಿಂದಿದ್ದಾರೆಂದು ಕಾರ್ತಿಕ್ಗೆ ಅವಕಾಶ ನೀಡಿರುವುದು ಸರಿಯಾದ ಆಯ್ಕೆಯಲ್ಲ ಎಂದಿದ್ದಾರೆ.
ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಮತ್ತೊಬ್ಬ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡದ ವಿರುದ್ಧ ಅವರ ನೆಲದಲ್ಲೇ ಅದ್ಭುತ ಪ್ರದರ್ಶನ ತೋರಿದರೂ ಪಂತ್ ಕೈಬಿಟ್ಟಿರುವುದು ಉತ್ತಮವಾದ ನಿರ್ಧಾರವಲ್ಲ. ದಿನೇಶ್ ಕಾರ್ತಿಕ್ಗೆ ಹಲವಾರು ಬಾರಿ ಅವಕಾಶ ನೀಡಿದರು ಅವರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರೂ ಮತ್ತೆ ಅವಕಾಶ ನೀಡಲಾಗಿದೆ. ಆದರೆ ಕಾರ್ತಿಕ್ಗಿಂತ ಪಂತ್ ನಿಜಕ್ಕೂ ಮೌಲ್ಯಯುತವಾದ ಆಟಗಾರನಾಗಿದ್ದರು ಎಂದಿದ್ದಾರೆ.
ಕಾರ್ತಿಕ್ 10 ವರ್ಷಗಳ ಅನುಭವ 21 ವರ್ಷದ ಯುವ ದಾಂಡಿಗನ ಸಾಮರ್ಥ್ಯವನ್ನು ಕಡೆಗಣಿಸಿ ಆಯ್ಕೆ ಸಮಿತಿ ನಿರ್ಧಾರದಿಂದ ಇಡೀ ದೇಶದ ಗಮನವನ್ನು ಇಂದು ಪಂತ್ ಪಡೆದಿದ್ದಾರೆ. ದಿಗ್ಗಜರಾದ ರಿಕಿಪಾಂಟಿಂಗ್,ಗಂಭೀರ್, ಸುನಿಲ್ ಗವಾಸ್ಕರ್ ಕೂಡ ಪಂತ್ ಕೈಬಿಟ್ಟಿರುವುದಕ್ಕೆ ಆಶ್ಚರ್ಯಕ್ಕೆ ಒಳಗಾಗಿದ್ದರು.