ಕರ್ನಾಟಕ

karnataka

ETV Bharat / briefs

ಇಮ್ರಾನ್​ ಜೊತೆ ಮುನಿಸು, ಜಿನ್​ಪಿಂಗ್​​ ಜೊತೆ ಮಾತು... ಪಾಕ್​ ಉಗ್ರವಾದ ಪ್ರಸ್ತಾಪಿಸಿದ ಮೋದಿ - ಕ್ಸಿ ಜಿನ್​​ಪಿಂಗ್

ಶಾಂಘೈ ಶೃಂಗಸಭೆಯಲ್ಲಿ ಪಾಕ್​ ಪ್ರಧಾನಿ ಇಮ್ರಾನ್ ಖಾನ್ ಸಹ ಭಾಗವಹಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಉಭಯ ದೇಶಗಳ ಪ್ರಧಾನಿಗಳ ನಡುವೆ ಯಾವುದೇ ರೀತಿಯ ಮಾತುಕತೆ ನಡೆದಿಲ್ಲ. ಈ ಇಬ್ಬರೂ ನಾಯಕರು ಹಸ್ತಲಾಘವ ಸಹ ಮಾಡಿಲ್ಲ. ಈ ಮಧ್ಯೆ ಚೀನಾ ಅಧ್ಯಕ್ಷರ ಜೊತೆ ಪಾಕಿಸ್ತಾನದಲ್ಲಿನ ಉಗ್ರವಾದದ ಬಗ್ಗೆ ಮೋದಿ ಮಾತನಾಡಿದ್ದಾರೆ.

ಭಯೋತ್ಪಾದನೆ

By

Published : Jun 14, 2019, 8:20 AM IST

Updated : Jun 14, 2019, 9:22 AM IST

ಬಿಶ್ಕೆಕ್​(ಕಿರ್ಗಿಸ್ತಾನ):ಶಾಂಘೈ ಶೃಂಗಸಭೆ ನಿಮಿತ್ತ ಬಿಶ್ಕೆಕ್​ನಲ್ಲಿರುವ ಪ್ರಧಾನಿ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್​​ಪಿಂಗ್​​​ ಜೊತೆಗೆ ಮಾತುಕತೆ ನಡೆಸಿದ್ದಾರೆ.

ಪಾಕಿಸ್ತಾನ ಭಯೋತ್ಪಾದನಾ ರಹಿತ ವಾತಾವರಣ ನಿರ್ಮಾಣ ಮಾಡಬೇಕು. ಆದರೆ ಸದ್ಯದ ಸ್ಥಿತಿಯಲ್ಲಿ ಈ ವಾತಾವರಣ ಕಾಣಿಸುತ್ತಿಲ್ಲ. ಪಾಕಿಸ್ತಾನ ಈ ನಿಟ್ಟಿನಲ್ಲಿ ಗಮನಹರಿಸುತ್ತದೆ ಎನ್ನುವ ಆಶಾಭಾವ ಹೊಂದಿದ್ದೇವೆ ಎಂದು ಪ್ರಧಾನಿ ಮೋದಿ ಅವರು ಚೀನಾ ಅಧ್ಯಕ್ಷರ ಜೊತೆಗಿನ ಮಾತುಕತೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಚೀನಾ ಆದ್ಯಕ್ಷರೊಂದಿಗೆ ಮಾತುಕತೆ ನಡೆಸಿದ ಪ್ರಧಾನಿ ಮೋದಿ

ಶಾಂಘೈ ಶೃಂಗಸಭೆಯಲ್ಲಿ ಪಾಕ್​ ಪ್ರಧಾನಿ ಇಮ್ರಾನ್ ಖಾನ್ ಸಹ ಭಾಗವಹಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಉಭಯ ದೇಶಗಳ ಪ್ರಧಾನಿಗಳ ನಡುವೆ ಯಾವುದೇ ರೀತಿಯ ಮಾತುಕತೆ ನಡೆದಿಲ್ಲ. ಈ ಇಬ್ಬರೂ ನಾಯಕರು ಹಸ್ತಲಾಘವ ಸಹ ಮಾಡಿಲ್ಲ.

ಸನಿಹವಿದ್ದರೂ ಅದೆಷ್ಟು ದೂರ! ಮೋದಿ-ಇಮ್ರಾನ್ ಪರಸ್ಪರ ನೋಡಲಿಲ್ಲ,ಮಾತಾಡಲಿಲ್ಲ

ಶೃಂಗಸಭೆಗೂ ಮುನ್ನ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಹಾಗೂ ಪ್ರಧಾನಿ ಇಮ್ರಾನ್ ಖಾನ್ ಪ್ರತ್ಯೇಕವಾಗಿ ಭಾರತದ ವಿದೇಶಾಂಗ ಇಲಾಖೆಗೆ ಪತ್ರ ಬರೆದು ಮಾತುಕತೆಯ ಮನವಿ ಮಾಡಿಕೊಂಡಿದ್ದರು. ಆದರೆ ಭಾರತ ಈ ಪತ್ರಕ್ಕೆ ಯಾವುದೇ ರೀತಿಯಲ್ಲೂ ಸ್ಪಂದಿಸಿಲ್ಲ.

Last Updated : Jun 14, 2019, 9:22 AM IST

ABOUT THE AUTHOR

...view details