ಕೊಪ್ಪಳ:ಬಾಲಿವುಡ್ ಆ್ಯಕ್ಷನ್ ಕಿಂಗ್ಅಕ್ಷಯ್‌ಕುಮಾರ್ ಅಭಿನಯದ 'ಪ್ಯಾಡ್‌ಮನ್' ಸಿನಿಮಾದಿಂದ ಪ್ರೇರಣೆಗೊಂಡ ಮಹಿಳೆವೋರ್ವಳು ನೈಸರ್ಗಿಕ ಸ್ನೇಹಿ ಸ್ಯಾನಿಟರಿ ಪ್ಯಾಡ್ ತಯಾರಿಸಿ ಋತುಚಕ್ರದ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಹಾಗಾದ್ರೆ ಆ ಪ್ಯಾಡ್ ವುಮನ್ ಕುರಿತು ಕಂಪ್ಲೀಟ್ ಈ ಸ್ಟೋರಿ ಇಲ್ಲಿದೆ ನೋಡಿ...
ಹೌದು, ಕೊಪ್ಪಳದ ಗವಿಶ್ರೀ ನಗರದ ನಿವಾಸಿಯಾಗಿರುವ ಭಾರತಿ ಗುಡ್ಲಾನೂರು ಎಂಬುವರೇ ಈ ಪ್ಯಾಡ್ ವುಮನ್. ಕಳೆದ ವರ್ಷ ತೆರೆಕಂಡಿದ್ದ ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್‌ಮನ್ ಸಿನಿಮಾದಿಂದ ಭಾರತಿ ಗುಡ್ಲಾನೂರು ಪ್ರೇರಣೆಗೊಂಡು, ಕಡಿಮೆ ಬೆಲೆಯಲ್ಲಿ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ತಯಾರಿಸಿ ನೀಡುತ್ತಿದ್ದಾರೆ. ಈ ಮೂಲಕ ಋತುಚಕ್ರದ ಬಗೆಗೆ ಅರಿವು ಮೂಡಿಸುತ್ತಿದ್ದಾರೆ. ಋತುಚಕ್ರದ ಸಂದರ್ಭದಲ್ಲಿ ಕಡ್ಡಾಯವಾಗಿ ಸ್ಯಾನಿಟರಿ ಪ್ಯಾಡ್ಗಳನ್ನು ಮಹಿಳೆಯರು ಬಳಸಬೇಕು ಎಂಬ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.
ಭಾರತಿ ಕಳೆದೊಂದು ವರ್ಷದಿಂದ ನೈಸರ್ಗಿಕವಾದ ಸ್ಯಾನಿಟರಿ ಪ್ಯಾಡ್ಗಳನ್ನು ತಯಾರಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬಗೆ ಬಗೆಯ ಬ್ರಾಂಡ್ನ ಸ್ಯಾನಿಟರಿ ಪ್ಯಾಡ್ಗಳು ಲಭ್ಯವಿವೆ. ಅವುಗಳಲ್ಲಿ ಪ್ಲಾಸ್ಟಿಕ್ ಇರುವುದರಿಂದ ಮಹಿಳೆಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿ, ಯಾವುದೇ ಅಡ್ಡ ಪರಿಣಾಮವಿಲ್ಲದ, ವಾಸನೆ ತಡೆಗಟ್ಟುವ ಈ ಪ್ಯಾಡ್ಗಳನ್ನು ಕಡಿಮೆ ಪ್ರಮಾಣದಲ್ಲಿ ತಯಾರಿಸುತ್ತಿದ್ದು, ಕಡಿಮೆ ಬೆಲೆಗೆ ನೇರವಾಗಿ ತಲುಪಿಸುತ್ತಿದ್ದೇವೆ. ಇದಕ್ಕೆಲ್ಲಾ ಪ್ಯಾಡ್‌ಮನ್ ಚಿತ್ರವೇ ಪ್ರೇರಣೆ ಎನ್ನುತ್ತಾರೆ ಭಾರತಿ ಗುಡ್ಲಾನೂರು.