ಕರ್ನಾಟಕ

karnataka

ETV Bharat / briefs

ಮಂಗಳೂರು ಡಿಸಿಪಿಯ ಜರ್ಮನಿ ಗೆಳೆಯರಿಂದ ಪೊಲೀಸರಿಗಾಗಿ ಆಕ್ಸಿಜನ್ ಕಾನ್ಸಂಟ್ರೇಟರ್​​ ನೆರವು - Mangalore DCP

ಡಿಸಿಪಿ ಹರಿರಾಂ ಶಂಕರ್ ಅವರು ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆ ಗೆಳೆಯರಾಗಿದ್ದ ರಿಶಿತ್ ಮತ್ತು ರಿತ್ವಿಕ್ ಎಂಬುವರು ಜರ್ಮನಿಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅವರು ಪೊಲೀಸರಿಗಾಗಿ ಆಕ್ಸಿಜನ್ ಕಾನ್ಸಂಟ್ರೇಟರ್ ಕಳುಹಿಸಿಕೊಟ್ಟಿದ್ದಾರೆ.

 Oxygen Concentrator for Police from Germany Friends of Mangalore DCP
Oxygen Concentrator for Police from Germany Friends of Mangalore DCP

By

Published : Jun 11, 2021, 7:31 PM IST

ಮಂಗಳೂರು: ಜರ್ಮನಿಯಲ್ಲಿರುವ ಡಿಸಿಪಿ ಹರಿರಾಂ ಶಂಕರ್ಗೆಳೆಯರಿಬ್ಬರು ಮಂಗಳೂರು ಪೊಲೀಸರ ಉಪಯೋಗಕ್ಕೆ ಆಕ್ಸಿಜನ್ ಕಾನ್ಸಂಟ್ರೇಟರ್ ನೆರವು ನೀಡಿದ್ದಾರೆ.

ಡಿಸಿಪಿ ಹರಿರಾಂ ಶಂಕರ್ ಅವರು ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆ ಗೆಳೆಯರಾಗಿದ್ದ ರಿಶಿತ್ ಮತ್ತು ರಿತ್ವಿಕ್ ಎಂಬುವರು ಜರ್ಮನಿಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಡಿಸಿಪಿ ಹರಿರಾಂ ಶಂಕರ್ ಜೊತೆಗೆ ಮಾತನಾಡುವ ವೇಳೆ ಪೊಲೀಸ್ ಇಲಾಖೆಗೆ ಆಕ್ಸಿಜನ್ ಕಾನ್ಸಂಟ್ರೇಟರ್ ಅಗತ್ಯವಿದೆಯಾ ಎಂದು ಪ್ರಶ್ನಿಸಿದ್ದಾರೆ.

ಮಂಗಳೂರಿನಲ್ಲಿ ಕೋವಿಡ್ ಸೋಂಕಿತ ಪೊಲೀಸರಿಗೆ ಈಗಾಗಲೇ ಆರಂಭಿಸಲಾದ ಕೋವಿಡ್ ಕೇರ್ ಸೆಂಟರ್​​ಗೆ ಒಂದು ಆಕ್ಸಿಜನ್ ಕಾನ್ಸಂಟ್ರೇಟರ್ ಅಗತ್ಯದ ಬಗ್ಗೆ ಡಿಸಿಪಿ ತಿಳಿಸಿದ್ದಾರೆ.

ಅದರಂತೆ ಅವರ ಗೆಳೆಯರು ಒಂದು ಆಕ್ಸಿಜನ್ ಕಾನ್ಸಂಟ್ರೇಟರ್​ಅನ್ನು ಜರ್ಮನಿಯಿಂದ ಕಳುಹಿಸಿಕೊಟ್ಟಿದ್ದಾರೆ. ಇದನ್ನು ಇಂದು ಮಂಗಳೂರಿನಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಕೋವಿಡ್ ಕೇರ್ ಸೆಂಟರ್ ಉಸ್ತುವಾರಿ ವಹಿಸಿರುವ ಡಾ. ಶ್ರೀನಿಧಿ ಅವರಿಗೆ ಹಸ್ತಾಂತರಿಸಿದರು.

ABOUT THE AUTHOR

...view details