ವಿಜಯಪುರ: ಮುದ್ದೇಬಿಹಾಳ ತಾಲೂಕಿನ ಸುಜಯ್ ಹೋಮ್ಸ್ ನೀಡ್ಸ್ ಶೋ ರೂಮ್ ಅಕೌಂಟ್ಗೆ ಹಾಕಿದ ₹14 ಸಾವಿರ ಹಣವು ಖಾತೆ ಸಂಖ್ಯೆ ತಪ್ಪಾಗಿದ್ದರಿಂದ ರೂಡಿಗಿ ಗ್ರಾಮದ ಸಾಹೇಬ ಪಟೇಲ್ ಎಂಬುವವರ ಖಾತೆಗೆ ಜಮಾ ಆಗಿತ್ತು.
ಮಾವವೀಯತೆ ಮೆರೆದ ಸಾಹೇಬ ಪಟೇಲ್ ಚಾಚಾ 14 ಸಾವಿರ ಹಿಂದಿರುಗಿಸುತ್ತಿರುವುದು ಯುನಿಯನ್ ಬ್ಯಾಂಕ್ನಲ್ಲಿ ವಿಚಾರಿಸಿ ಗ್ರಾಹಕ ಪಟೇಲ್ ಅವರ ದೂರವಾಣಿ ಸಂಖ್ಯೆಯನ್ನು ತೆಗೆದುಕೊಂಡು ಅವರಿಗೆ ಕರೆ ಮೂಲಕ ಸಂಪರ್ಕಿಸಲಾಗಿದೆ. ಕೂಡಲೇ ಖಾತೆಯ ವಿವರ ಪಡೆದ ಸಾಹೇಬ ಪಟೇಲರು ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡದ್ದಾರೆ.
ರಂಜಾನ್ ಮುಗಿಸಿ ಖುದ್ದಾಗಿ ಸಾಹೇಬ ಪಟೇಲರು ಶೋ ರೂಮ್ಗೆ ಹೋಗಿ ಅವರ ಹಣವನ್ನು ವಾಪಾಸ್ ನೀಡಿದ್ದಾರೆ. ನಿಜಕ್ಕೂ ಹಣ ಕಂಡರೆ ಹೆಣವೇ ಬಾಯಿ ಬಿಡುವ ಈ ಕಾಲದಲ್ಲಿ ಇಂಥ ಅಪರೂಪದ ವಿರಳ ವ್ಯಕ್ತಿತ್ವದ ಜನರು ಆದರ್ಶವಾಗಿದ್ದಾರೆ.
ಈ ಮೊದಲು ಹೀಗೆ ₹ 3 ಸಾವಿರ ಜಮೆ ಆಗಿತ್ತು. ಆಗಲೂ ವಾಪಾಸ್ ನೀಡಿದ್ದೇನೆ. ಕೈ ತಪ್ಪಿನಿಂದ ಆದ ಘಟನೆಗಳು ಎಂದು ನಗುತ್ತಲೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಾಹೇಬ ಪಟೇಲ ಚಾಚಾ.