ಕತಿಹಾರ್ (ಬಿಹಾರ):ಬಿಹಾರದ ಕತಿಹಾರ್ ರೈಲ್ವೆ ನಿಲ್ದಾಣದಿಂದ 226 ಆಮ್ಲಜನಕ ಸಿಲಿಂಡರ್‌ಗಳನ್ನು ಜಿಲ್ಲಾಡಳಿತ ಭಾನುವಾರ ವಶಪಡಿಸಿಕೊಂಡಿದೆ.
ಕಟಿಹಾರ್ ಡಿಎಂ ಉದಯನ್ ಮಿಶ್ರಾ ನೇತೃತ್ವದ ತಂಡವು ಕಟಿಹಾರ್ ರೈಲ್ವೆ ನಿಲ್ದಾಣದ ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ ರೈಲಿನಲ್ಲಿ ದಾಳಿ ನಡೆಸಿದ್ದು, ಆಮ್ಲಜನಕ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಾಳಿಯಲ್ಲಿ 226 ಆಕ್ಸಿಜನ್ ತುಂಬಿದ್ದ ಸಿಲಿಂಡರ್‌ಗಳೇ ಇದ್ದವು. ಈ ಸಂದರ್ಭದಲ್ಲಿ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಜಾರಿಗೆ ತರಲು ಜಿಲ್ಲಾಡಳಿತ ಪರಿಗಣಿಸಿದೆ, ಎಂದು ಕತಿಹಾರ್ ಸದರ್‌ನ ಎಸ್‌ಡಿಎಂ ಶಂಕರ್ ಶರಣ್ ಓಮಿ ಹೇಳಿದರು.
ವಶಪಡಿಸಿಕೊಂಡ ಎಲ್ಲ ಆಮ್ಲಜನಕ ಸಿಲಿಂಡರ್‌ಗಳು 6 ಕೆ.ಜಿ.ಗಳಾಗಿದ್ದು, ಈವರೆಗೂ ಯಾರನ್ನೂ ಬಂಧಿಸಲಾಗಿಲ್ಲ. ಆರೋಪಿಗಳನ್ನು ಬಂಧಿಸಲು ಪೊಲೀಸರು ತನಿಖೆ ಆರಂಭಿಸಿ, ಹೆಚ್ಚಿನ ತನಿಖೆ ನಡೆಯುತ್ತಿದೆ, ಎಂದು ಹೇಳಿದರು.