ಚಿಕ್ಕಮಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆ ರಹಸ್ಯ ಮಾತುಕತೆ ನಡೆಸಿದ ಬಳಿಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಪಕ್ಷದಲ್ಲಿನ ಬೆಳವಣಿಗೆ ಆತಂಕ ಉಂಟು ಮಾಡಿದೆ; ಸಿ.ಟಿ. ರವಿ - karnataka latest political update
ಸಿಎಂ ಬದಲಾವಣೆ ಮಾಡಬೇಕು ಎಂಬ ಕೂಗು ಹೆಚ್ಚಾಗತೊಡಗುತ್ತಿದ್ದಂತೆ ಇಂದು ನಳಿನ್ ಕುಮಾರ್ ಕಟೀಲ್ ಜೊತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತುಕತೆ ನಡೆಸಿದ್ದಾರೆ.
Our party should not go against our wishes: CT Ravi
ನಮ್ಮ ಪಕ್ಷಕ್ಕೆ ಸಾವಿರಾರು ಜನರ ತಪಸ್ಸು, ಪರಿಶ್ರಮವಿದೆ. ಎಲ್ಲರ ಪರಿಶ್ರಮದ ಫಲವಾಗಿ ಅಧಿಕಾರದಲ್ಲಿದ್ದೇವೆ. ನಮ್ಮ ಆದ್ಯತೆ ಜನರ ಹಿತ ಕಾಯೋದು. ಇತ್ತೀಚಿನ ಕೆಲವು ಬೆಳವಣಿಗೆ ನಮಗೆ ಕಳವಳ ಉಂಟು ಮಾಡಿದೆ. ಆ ನಿಟ್ಟಿನಲ್ಲಿ ಯಾಕೆ ಹೀಗೆ ಆಗುತ್ತಿದೆ ಎಂಬ ಬಗ್ಗೆ ಇಬ್ಬರಿಗೂ ಆತಂಕವಿದೆ ಎಂದರು.
ಯಾರದ್ದೋ ಪರಿಶ್ರಮದಿಂದ ಕಷ್ಟಪಟ್ಟು ಕಟ್ಟಿರುವ ಪಕ್ಷ. ನಮ್ಮ ಆಶಯಗಳಿಗೆ ವಿರುದ್ಧ ಹೋಗಬಾರದು. ಆ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದೇವೆ. ನಾವಿಬ್ಬರೇ ನಿರ್ಣಯ ಕೈಗೊಳ್ಳಲು ಆಗುವುದಿಲ್ಲ. ಪಕ್ಷದ ಹಿರಿಯರಿದ್ದಾರೆ, ಕೋರ್ ಕಮಿಟಿ ಇದೆ. ಅವರ ಜೊತೆ ಸಮಾಲೋಚನೆ ನಡೆಸಿ ಏನು ಮಾಡಬೇಕು ಅದನ್ನ ಮಾಡ್ತೇವೆ ಎಂದಿದ್ದಾರೆ.
Last Updated : May 28, 2021, 8:29 PM IST