ಲಂಡನ್:ಬಹುನಿರೀಕ್ಷಿತ ಐಸಿಸಿ ವಿಶ್ವಕಪ್ ಮಹಾಮೇಳದ ಪಂದ್ಯಗಳು ನಾಳೆಯಿಂದ ಆರಂಭಗೊಳ್ಳಲಿದ್ದು, ಅದಕ್ಕೂ ಮುನ್ನಾದಿನವಾದ ಇಂದು ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ.
ಸೆಂಟ್ರಲ್ ಲಂಡನ್ನ 'ದಿ ಮಾಲ್' ಎಂಬ ನಗರದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಹಿಂದಿನಿಗಿಂತಲೂ ಮತ್ತಷ್ಟು ಅದ್ಧೂರಿಯಾಗಿ ಸಮಾರಂಭ ನಡೆಸಲು ಐಸಿಸಿ ಸಜ್ಜಾಗಿದೆ. ಕಾರ್ಯಕ್ರಮದಲ್ಲಿ ಲೈವ್ ಸ್ಪೋರ್ಟ್ಸ್, ಸಂಗೀತ ಸೇರಿದಂತೆ ವಿವಿಧ ಮನೋರಂಜನಾ ಕಾರ್ಯಗಳು ನಡೆಯಲಿದ್ದು, 4 ಸಾವಿರ ಅಭಿಮಾನಿಗಳು ಈ ಸಂಭ್ರಮದ ಕ್ಷಣಗಳನ್ನು ಕಣ್ತುಂಬಿಕೊಳ್ಳಲಿದ್ದಾರೆ. ಈ ಹಿಂದೆ ನಡೆದಿರುವ ವಿಶ್ವಕಪ್ಗಳಿಗಿಂತಲೂ ವಿಭಿನ್ನವಾಗಿ ಹಾಗೂ ಅದ್ಧೂರಿಯಾಗಿ ಈ ಕಾರ್ಯಕ್ರಮ ನಡೆಸಲು ಐಸಿಸಿ ಯೋಜನೆ ಹಾಕಿಕೊಂಡಿದ್ದು, ಅತೀ ಹೆಚ್ಚು ಹಣ ಕೂಡ ವೆಚ್ಚ ಮಾಡುವ ಸಾಧ್ಯತೆ ಇದೆ.