ಕರ್ನಾಟಕ

karnataka

ETV Bharat / briefs

ಯಾದಗಿರಿಯಲ್ಲಿ ಮಹಿಳೆಗೆ ಕೊರೊನಾ: 881ಕ್ಕೆ ಏರಿದ ಸೋಂಕಿತರ ಸಂಖ್ಯೆ - Corona virus updates

ರಾಜ್ಯದಲ್ಲಿ ಕೋವಿಡ್ ಕಾವು ಹೆಚ್ಚಾಗುತ್ತಿದ್ದು, ಯಾದಗಿರಿ ಜಿಲ್ಲೆಯಲ್ಲಿಂದು ಓರ್ವ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.

One more corona cases found in yadagiri
One more corona cases found in yadagiri

By

Published : Jun 22, 2020, 10:05 PM IST

ಯಾದಗಿರಿ:ಜಿಲ್ಲೆಯಲ್ಲಿಂದು ಓರ್ವ ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟಿದೆ.

ವಡಗೇರಾ ತಾಲೂಕಿನ ಬೀರನಕಲ್ ಗ್ರಾಮದ 35 ವರ್ಷದ ಮಹಿಳೆ (ಪಿ-9365) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಸೋಂಕಿತ ಮಹಿಳೆ ಅಂತಾರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದ ಮುಂಬೈಯಿಂದ ಜಿಲ್ಲೆಗೆ ಹಿಂದಿರುಗಿದ್ದರು.

ಸದ್ಯ ಮಹಿಳೆಯನ್ನ ಚಿಕಿತ್ಸೆಗಾಗಿ ಜಿಲ್ಲೆಯ ನಿಗದಿತ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 881 ಕೋವಿಡ್ ಪ್ರಕರಣಗಳ ಪೈಕಿ 546 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ.

ABOUT THE AUTHOR

...view details