ಭಟ್ಕಳ :ಮುಂಬೈನಿಂದ ಬಂದ ವ್ಯಕ್ತಿಯೋರ್ವನಲ್ಲಿ 7 ದಿನ ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ ನಂತರ ಕೋವಿಡ್-19 ಸೋಂಕು ಇರುವುದು ಪತ್ತೆಯಾಗಿದೆ. ಮುರುಡೇಶ್ವರದ ತೆರ್ನಮಕ್ಕಿ ನಿವಾಸಿಯಾದ 43 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕಿರುವುದು ದೃಢವಾಗಿದೆ.
ಸೋಂಕಿತ ವ್ಯಕ್ತಿ ಜೂನ್ 5ರಂದು ಮುಂಬೈನಿಂದ ಮುರುಡೇಶ್ವರಕ್ಕೆ ಬಂದಿದ್ದು ನಂತರ 7 ದಿನ ಸಾಂಸ್ಥಿಕ ಕ್ವಾರಂಟೈನ್ ಮುಗಿಸಿ ಜೂನ್ 12ರಂದು ಮನೆಗೆ ತೆರಳಿದ್ದರು.