ಕರ್ನಾಟಕ

karnataka

ETV Bharat / briefs

ಮುಂಬೈನಿಂದ ಮರಳಿದ್ದ ಬೆಳಗಾವಿಯ 22 ವರ್ಷದ ಯುವತಿಗೆ ಕೊರೊನಾ ಸೋಂಕು ದೃಢ - ಕೊರೊನಾ ವೈರಸ್

ಮಹಾರಾಷ್ಟ್ರದಿಂದ ಬಂದಿದ್ದ ಸವದತ್ತಿ ತಾಲೂಕಿನ ಸಿಂಗಾರಗೊಪ್ಪದ ಯುವತಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸಂಪರ್ಕಿತರ ಮೇಲೆ ಜಿಲ್ಲಾಡಳಿತ ನಿಗಾವಹಿಸಿದೆ.

One more corona cases found in belagavi district
One more corona cases found in belagavi district

By

Published : Jun 27, 2020, 10:40 PM IST

ಬೆಳಗಾವಿ:ಮುಂಬೈನಿಂದ ಮರಳಿದ್ದ 22 ವರ್ಷದ ಯುವತಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ ಇದೀಗ 318ಕ್ಕೆ ಏರಿಕೆಯಾಗಿದೆ.

ಜಿಲ್ಲೆಯ ಸವದತ್ತಿ ತಾಲೂಕಿನ ಸಿಂಗಾರಗೊಪ್ಪ ಗ್ರಾಮದ ಯುವತಿ ಇತ್ತೀಚೆಗಷ್ಟೆ ಮುಂಬೈನಿಂದ ಮರಳಿದ್ದಳು. ಸಧ್ಯ ಯುವತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ತಂದೆ, ತಾಯಿ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದಿದ್ದ ಪಕ್ಕದ ಮನೆಯ ನಾಲ್ವರ ಮೇಲೆ ಜಿಲ್ಲಾಡಳಿತ ನಿಗಾ ಇಟ್ಟಿದೆ. ಜಿಲ್ಲೆಯಲ್ಲಿ ಒಟ್ಟು 21 ಕೊರೊನಾ ಆ್ಯಕ್ಟಿವ್​ ಪ್ರಕರಣಗಳಿವೆ.

ABOUT THE AUTHOR

...view details