ಕರ್ನಾಟಕ

karnataka

ETV Bharat / briefs

ಕೊರೊನಾ ಸೋಂಕು ತಗುಲಿದ್ದ ಗಂಗಾವತಿ ನರ್ಸ್ ಗುಣಮುಖ - Corona virus

ಕೊರೊನಾ‌ ಸೋಂಕು ತಗುಲಿದ ಪರಿಣಾಮ‌ ಕಳೆದ ಒಂದು ವಾರದಿಂದ ಇಲ್ಲಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿರುವ ಉಪ ವಿಭಾಗ ಆಸ್ಪತ್ರೆಯ ನರ್ಸ್ ಇದೀಗ ಗುಣಮುಖರಾಗಿದ್ದಾರೆ.

One corona cases discharge in gangavati
One corona cases discharge in gangavati

By

Published : Jun 21, 2020, 11:19 PM IST

ಗಂಗಾವತಿ: ಕಳೆದ ಒಂದು ವಾರದಿಂದ ಇಲ್ಲಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿರುವ ಉಪ ವಿಭಾಗ ಆಸ್ಪತ್ರೆಯ ನರ್ಸ್ ಇದೀಗ ಕೋವಿಡ್ ನಿಂದ ಗುಣಮುಖರಾಗಿದ್ದಾರೆ.

ಉಪ ವಿಭಾಗ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ 32 ವರ್ಷದ ಮಹಿಳಾ ಉದ್ಯೋಗಿಗೆ ಕಳೆದ ವಾರ ಸೋಂಕು ತಗುಲಿತ್ತು. ವಿಶೇಷ ಪ್ರಕರಣ ಎಂದು ಪರಿಗಣಿಸಿದ ಆರೋಗ್ಯ ಇಲಾಖೆ ನರ್ಸ್ ಗೆ ಇಲ್ಲಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಗೆ ಒಳಪಡಿಸಿತ್ತು.

ಇದೀಗ ನರ್ಸ್ ಸಂಪೂರ್ಣ ಗುಣಮುಖರಾಗಿದ್ದು, ಸೋಮವಾರ ಬೆಳಗ್ಗೆ ಡಿಸ್ಚಾರ್ಜ್ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಇದೀಗ ನರ್ಸ್ ಸಂಪೂರ್ಣ ಗುಣಮುಖರಾಗಿದ್ದು, ಸೋಮವಾರ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

ABOUT THE AUTHOR

...view details