ಕೋಲ್ಕತ್ತಾ:ತೃಣಮೂಲ ಕಾಂಗ್ರೆಸ್ ಸಂಸದೆ ಮತ್ತು ನಟಿ ನುಸ್ರತ್ ಜಹಾನ್ ಅವರ ಬೇಬಿ ಬಂಪ್ ಫೋಟೊವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ನಟಿ ನುಸ್ರತ್ ಜಹಾನ್ ಗಂಡನ ಜೊತೆ ಸಂಬಂಧ ಮುರಿದುಕೊಂಡಿರುವ ಬಗ್ಗೆ, ಬೇರೆ ಪ್ರೇಮ ಸಂಬಂಧ ಹೊಂದಿರುವ ಬಗ್ಗೆ ಈಗಾಗಲೇ ವದಂತಿಗಳು ಕೇಳಿಬಂದಿದ್ದು, ಈ ಫೋಟೋ ಹೊಸ ಕಥೆ ಹೇಳುವಂತಿದೆ.
ಟಿಎಂಸಿ ಸಂಸದೆ ನುಸ್ರತ್ ಬೇಬಿ ಬಂಪ್ ಫೋಟೊ ವೈರಲ್... - ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್
ನಟಿ ನುಸ್ರತ್ ಜಹಾನ್ ಗಂಡನ ಜೊತೆ ಸಂಬಂಧ ಮುರಿದುಕೊಂಡಿರುವ ಬಗ್ಗೆ ಈಗಾಗಲೇ ವದಂತಿಗಳು ಕೇಳಿ ಬಂದಿದೆ. ಈ ಮಧ್ಯೆ ಜಹಾನ್ ಅವರ ಬೇಬಿ ಬಂಪ್ ಫೋಟೊವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಸ್ನೇಹಿತೆಯರ ಜೊತೆಗೆ ನಿಂತಿರುವ ನುಸ್ರತ್ ಅವರ ಗ್ರೂಪ್ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೊದಲ್ಲಿ ಬೇಬಿ ಬಂಪ್ ಹೊಂದಿರುವಂತೆ ಕಾಣಿಸುತ್ತಿದ್ದು, ಜೊತೆಯಲ್ಲಿ ನುಸ್ರತ್ ಅವರ ಆತ್ಮೀಯ ಗೆಳತಿ, ಬೆಂಗಾಲಿ ನಟಿ ಶ್ರವಂತಿ ಚಟರ್ಜಿ ಇದ್ದಾರೆ.
ಇನ್ನು ಕೆಲ ದಿನಗಳ ಹಿಂದೆ, ನುಸ್ರತ್ ಜಹಾನ್ ತಮ್ಮ ಗಂಡ ನಿಖಿಲ್ ಜೈನ್ ಜೊತೆಗಿನ ವಿವಾಹ ಸಂಬಂಧವನ್ನು ಕಳೆದುಕೊಂಡಿರುವುದಾಗಿ ಘೋಷಿಸಿದ್ದರು. ಇನ್ನು ಜೂನ್ 9ರಂದು 7 ಅಂಶಗಳಿರುವ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು. ಇದರಲ್ಲಿ ನಿಖಿಲ್ ಜೊತೆಗಿನ ವಿವಾಹವು ಟರ್ಕಿಷ್ ಕಾನೂನಿನ ಪ್ರಕಾರ ನಡೆದಿದೆ. ಭಾರತದಲ್ಲಿ ಅದಕ್ಕೆ ಮಾನ್ಯತೆ ಇಲ್ಲ ಎಂದು ತಿಳಿಸಿದ್ದರು.