ಕರ್ನಾಟಕ

karnataka

ETV Bharat / briefs

ಮಕ್ಕಳಾಗಲು ಬಾಲಕಿ ಕೊಂದ ದಂಪತಿ: ಎನ್‌ಎಸ್‌ಎ ಅಡಿಯಲ್ಲಿ ಪ್ರಕರಣ ದಾಖಲು

ಮಕ್ಕಳಿಲ್ಲದ ದಂಪತಿ ಮಕ್ಕಳನ್ನು ಹೊಂದಲು, ಇನ್ನಿಬ್ಬರ ಸಹಾಯದಿಂದ ಏಳು ವರ್ಷದ ಬಾಲಕಿ ಹತ್ಯೆ ಮಾಡಿ, ಬಾಲಕಿಯ ಲಿವರ್ ಮತ್ತು ಶ್ವಾಸಕೋಶ ಹೊರ ತೆಗೆದು ತಿಂದಿದ್ದರು.

nsa
nsa

By

Published : Jun 21, 2021, 7:19 PM IST

ಕಾನ್ಪುರ (ಉತ್ತರ ಪ್ರದೇಶ):2020ರ ನವೆಂಬರ್‌ನಲ್ಲಿ ಘತಂಪುರ ಪೊಲೀಸ್ ಪ್ರದೇಶದಲ್ಲಿ ಏಳು ವರ್ಷದ ಬಾಲಕಿ ಹತ್ಯೆ ಮಾಡಿ ದಂಪತಿ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

ದೀಪಾವಳಿಯಂದು 'ತಾಂತ್ರಿಕ' ಆಚರಣೆಯ ಭಾಗವಾಗಿ ಈ ನಾಲ್ವರು ಬಾಲಕಿಯ ಲಿವರ್ ಮತ್ತು ಶ್ವಾಸಕೋಶ ಹೊರತೆಗೆದಿದ್ದರು. ಮಕ್ಕಳಿಲ್ಲದ ದಂಪತಿಗಳು ಮಕ್ಕಳನ್ನು ಹೊಂದಲು ಈ ಭೀಕರ ಅಪರಾಧದಲ್ಲಿ ತೊಡಗಿದ್ದರು.

ಕಾನ್ಪುರ ನಗರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಲೋಕ್ ತಿವಾರಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, "ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಶುರಾಮ್ ಮತ್ತು ಅವರ ಪತ್ನಿ ಸುನೈನಾ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ನಾವು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ಹೊಡೆದಿದ್ದೇವೆ" ಎಂದು ಹೇಳಿದರು.

ಯುವಕನೊಬ್ಬ ಮತ್ತು ಅವನ ಸಹಚರ ತಮ್ಮ ನೆರೆಹೊರೆಯಲ್ಲಿದ್ದ ಏಳು ವರ್ಷದ ಬಾಲಕಿಯನ್ನು ಅಪಹರಿಸಿ, ಅವಳ ಲಿವರ್ ಮತ್ತು ಶ್ವಾಸಕೋಶ ಹೊರತೆಗೆದು ಚಿಕ್ಕಪ್ಪ ಮತ್ತು ಚಿಕ್ಕಮ್ಮನಿಗೆ ದೀಪಾವಳಿಯಂದು 'ತಾಂತ್ರಿಕ' ಆಚರಣೆಯ ಭಾಗವಾಗಿ ತಿನ್ನಲು ಕೊಟ್ಟಿದ್ದಾರೆ. ಮಕ್ಕಳಿಲ್ಲದ ದಂಪತಿಗಳು ಇದರಿಂದ ಮಕ್ಕಳನ್ನು ಹೊಂದಬಹುದು ಎಂದು ನಂಬಿದ್ದರು.

ABOUT THE AUTHOR

...view details