ಉಜ್ಜಯಿನಿ (ಮಧ್ಯ ಪ್ರದೇಶ):ಕೋವಿಡ್ -19 ವಿರುದ್ಧ ಶೇಕಡಾ 100ರಷ್ಟು ಲಸಿಕೆ ಹಾಕುವ ಗುರಿ ಸಾಧಿಸುವ ಹಿನ್ನೆಲೆ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲಾಡಳಿತವು ವ್ಯಾಕ್ಸಿನ್ ಪಡೆಯದಿದ್ದರೆ ಮುಂದಿನ ತಿಂಗಳಿನಿಂದ ಸರ್ಕಾರಿ ನೌಕರರಿಗೆ ಸಂಬಳ ಸಿಗುವುದಿಲ್ಲ ಎಂದು ಆದೇಶ ಹೊರಡಿಸಿದೆ.
ಈ ಕುರಿತು ಜಿಲ್ಲಾಧಿಕಾರಿ ಆಶಿಶ್ ಸಿಂಗ್ ಮಂಗಳವಾರ ಆದೇಶ ಹೊರಡಿಸಿದ್ದು, ಜುಲೈ 31ರೊಳಗೆ ಲಸಿಕೆ ಪಡೆಯಲು ವಿಫಲವಾದರೆ ಸರ್ಕಾರಿ ನೌಕರರ ವೇತನವನ್ನು ವಿತರಿಸಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.