ಕರ್ನಾಟಕ

karnataka

ETV Bharat / briefs

ಮಹಾ ಪತನ: ಟಿವಿ ಸುದ್ದಿ ಮಾಧ್ಯಮಗಳಿಂದ ಕೈ ಪಕ್ಷ ದೂರ!

ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಾಣುತ್ತಿದ್ದಂತೆ ರಾಹುಲ್​ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ಕಾರಣ, ಯಾವುದೇ ಬಹಿರಂಗ ಹೇಳಿಕೆ ನೀಡದಂತೆ ಕ್ರಮ ಕೈಗೊಳ್ಳಲು ಕಾಂಗ್ರೆಸ್​ ಈ ನಿರ್ಧಾರ ಕೈಗೊಂಡಿದೆ.

ರಣದೀಪ್​ ಸುರ್ಜೇವಾಲ್

By

Published : May 30, 2019, 11:19 AM IST

ನವದೆಹಲಿ:ಲೋಕಸಭಾ ಚುನಾವಣೆಯಲ್ಲಿನ ಹೀನಾಯ ಸೋಲು ಹಾಗೂ ರಾಹುಲ್​ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಉದ್ಭವವಾಗಿರುವ ಗೊಂದಲದಿಂದಾಗಿ, ಪಕ್ಷದ ಮುಖಂಡರು ಯಾವುದೇ ಕಾರಣಕ್ಕೂ ಮಾಧ್ಯಮಗಳ ಸಂದರ್ಶನಗಳಲ್ಲಿ ಭಾಗಿಯಾಗದಂತೆ ಕಾಂಗ್ರೆಸ್​ ಖಡಕ್​ ಸೂಚನೆ ನೀಡಿದೆ.

ಮುಂದಿನ ಒಂದು ತಿಂಗಳ ಕಾಲ ಯಾವುದೇ ಸುದ್ದಿ ವಾಹಿನಿಗಳ ಸಂದರ್ಶನದಲ್ಲಿ ಭಾಗಿಯಾಗದಂತೆ ಪಕ್ಷದ ವಕ್ತಾರ ರಣದೀಪ್​ ಸುರ್ಜೇವಾಲ್​ ಮಾಹಿತಿ ನೀಡಿ , ಟ್ವಿಟ್​ ಮಾಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಾಣುತ್ತಿದ್ದಂತೆ ರಾಹುಲ್​ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದ್ದು, ಅದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ಮೇಲಿಂದ ಮೇಲೆ ಸಭೆ ಕೂಡ ನಡೆಸುತ್ತಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್​ ಮುಖಂಡರು, ಪ್ರತಿನಿಧಿಗಳು ಯಾವುದೇ ಬಹಿರಂಗ ಹೇಳಿಕೆ ನೀಡದಂತೆ ತಡೆಯಲು ಈ ಕ್ರಮಕ್ಕೆ ಮುಂದಾಗಿದೆ.

ಇದರ ಜತೆಗೆ ಕಾಂಗ್ರೆಸ್​ ಪ್ರತಿನಿಧಿಗಳನ್ನು ತಮ್ಮ ಸಂದರ್ಶನ ಅಥವಾ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಬಳಕೆ ಮಾಡಿಕೊಳ್ಳದಂತೆ ಸುದ್ದಿ ಮಾಧ್ಯಮಗಳಿಗೂ ಮನವಿ ಮಾಡಿಕೊಳ್ಳುವುದಾಗಿ ಸುರ್ಜೇವಾಲ ತಿಳಿಸಿದ್ದಾರೆ.

ABOUT THE AUTHOR

...view details