ಕರ್ನಾಟಕ

karnataka

ETV Bharat / briefs

ವಾಣಿಜ್ಯ ನಗರಿಯಲ್ಲಿ ಕೊರೊನಾ ಭೀತಿ: ಸಾಮಾಜಿಕ ಅಂತರ ಮರೆತ ಬೇಂದ್ರೆ ಸಾರಿಗೆ - Hublidharwad news

ಸಾಮಾಜಿಕ ಅಂತರದ ಜೊತೆಗೆ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಿ ಜನರನ್ನು ಹೊತ್ತು ಸಾಗಬೇಕಿದ ಹುಬ್ಬಳ್ಳಿ -ಧಾರವಾಡ ಬೇಂದ್ರೆ ನಗರ ಸಾರಿಗೆ ಬಸ್ ಗಳು ಸರ್ಕಾರದ ಆದೇಶಗಳಿಗೆ ಕ್ಯಾರೆ ಎನ್ನುತ್ತಿಲ್ಲ.

No social distance in hubli bendre bus
No social distance in hubli bendre bus

By

Published : Jun 11, 2020, 11:21 PM IST

ಹುಬ್ಬಳ್ಳಿ :ಕೊರೊನಾ ಭೀತಿಯ ನಡುವೆ ಸರ್ಕಾರ ನಿಯಮಾನುಸಾರದೊಂದಿಗೆ ಸಾರಿಗೆ ಸಂಸ್ಥೆಗಳ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟ ಬೆನ್ನಲ್ಲೆ ನಗರದಲ್ಲಿ ಬೇಂದ್ರೆ ನಗರ ಸಾರಿಗೆ ಸಾಮಾಜಿಕ ಅಂತರ ಗಾಳಿಗೆ ತೂರಿ ನಿಯಮ ಉಲ್ಲಂಘಿಸಿದೆ.

ಸಾರಿಗೆ ಸಂಸ್ಥೆಯವರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು, ಅಲ್ಲದೇ ಖಾಸಗಿ ವಾಹನಗಳಿಗೂ ಕೂಡ ಈ ನಿಯಮ ಅನ್ವಯ ಎಂದು ಸರ್ಕಾರ ಆದೇಶ ನೀಡಿದೆ‌. ಆದ್ರೆ ಹು-ಧಾ ಮಹಾನಗರದಲ್ಲಿ ಬೇಂದ್ರೆ ನಗರ ಸಾರಿಗೆ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ಪ್ರಯಾಣಿಕರನ್ನು ಹೊತ್ತುಕೊಂಡು ಸಂಚರಿಸುತ್ತಿವೆ.

ಕೋವಿಡ್ ಭಯ ಮರೆತು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಇದಕ್ಕೆಲ್ಲಾ ಯಾರು ಹೊಣೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಜರುಗಿಸಬೇಕಿದೆ.

ABOUT THE AUTHOR

...view details