ಬಿಶ್ಕೇಕ್: ಭಾರತದ ಮೇಲೆ ಪದೇ ಪದೆ ದಾಳಿ ಮಾಡುತ್ತಿರುವ ಪಾಕ್ನೊಂದಿಗೆ ಮಾತುಕತೆಗೆ ಅವಕಾಶವೇ ಇಲ್ಲವೆಂದು ಭಾರತ ಹೇಳುತ್ತಲೇ ಬಂದಿದೆ. ಇನ್ನು ಎಸ್ಸಿಒ ಸಮ್ಮಿತ್ನಲ್ಲಿ ಪ್ರಧಾನಿ ಮೋದಿ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಂದೇ ಕಡೆ ಊಟಕ್ಕೆ ಬಂದರೂ ಪರಸ್ಪರ ಹಸ್ತಲಾಘವ ಕೂಡ ಮಾಡಿಲ್ಲ.
ಬಿಶ್ಕೇಕ್ನಲ್ಲಿ ನಡೆಯುತ್ತಿರುವ ಶಾಂಘೈ ಕೊಆಪರೇಷನ್ ಆರ್ಗನೈಸೇಷನ್ (SCO) ಸಮ್ಮಿತ್ನಲ್ಲಿ ಇತರೆ ದೇಶಗಳೊಂದಿಗೆ ಉಭಯ ದೇಶಗಳ ಪ್ರಧಾನಿಗಳು ಭಾಗವಹಿಸಿದ್ದಾರೆ. ಮೊದಲ ದಿನ ಸಮಿತಿ ಸಭೆಯ ನಂತರ ಇಂದು ಕಿರ್ಗಿಸ್ತಾನದ ಪ್ರಧಾನಿ ಸೂರೊನ್ಬೆ ಜೂನ್ಬೇಕೊವ್ ಅವರು ಅನೌಚಾರಿಕವಾಗಿ ಓತಣ ಕೂಟ ಏರ್ಪಡಿಸಿದ್ದರು. ಪ್ರಧಾನಿ ಮೋದಿ ಹಾಗೂ ಇಮ್ರಾನ್ ಖಾನ್ ಒಂದೇ ಸಮಯಕ್ಕೆ ಭೋಜನಾಲಯಕ್ಕೆ ಆಗಮಿಸಿದ್ದಾರೆ.