ಮುಂಬೈ:ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನೀತಾ ಅಂಬಾನಿ ಮಾಲಿಕತ್ವದ ಮುಂಬೈ ಇಂಡಿಯನ್ಸ್ ತಂಡ ಟ್ರೋಫಿ ಗೆದ್ದಾಗಿದೆ. ತಂಡದೊಂದಿಗೆ ನೀತಾ ಸಂಭ್ರಮಾಚರಣೆಯಲ್ಲಿ ಭಾಗಿಯಾದ ಬಳಿಕ ರಾತ್ರಿ ಮನೆಗೆ ತೆರಳಿ ದೇವರ ಕೋಣೆಯಲ್ಲಿ ಕೃಷ್ಣನ ಮೂರ್ತಿಯ ಮುಂದೆ ಟ್ರೋಫಿಯನ್ನಿಟ್ಟು ಭಜನೆ ಮಾಡಿದ್ದಾರೆ.
ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮ: ಕೃಷ್ಣನ ಪಾದದ ಮುಂದಿಟ್ಟು ಭಜನೆ ಮಾಡಿದ ನೀತಾ ಅಂಬಾನಿ! - ನೀತಾ ಅಂಬಾನಿ
ಟ್ರೋಫಿ ಗೆಲ್ಲುತ್ತಿದ್ದಂತೆ ಮುಂಬೈನ ವಿವಿಧ ರೋಡ್ಗಳಲ್ಲಿ ತಂಡದೊಂದಿಗೆ ಸಂಭ್ರಮಾಚರಣೆ ಮಾಡಿದ್ದ ನೀತಾ ಅಂಬಾನಿ ತಂದನಂತರ ಮನೆಗೆ ತೆರಳಿ ಕೃಷ್ಣನ ಮುಂದಿಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನೀತಾ ಅಂಬಾನಿ ಸಂಭ್ರಮ
ಮುಂಬೈನ ಅಂಟಿಲಿಯಾ’ ನಿವಾಸದಲ್ಲಿರುವ ದೇವರ ಕೋಣೆಗೆ ತೆರಳಿರುವ ನೀತಾ ಅಂಬಾನಿ, ಐಪಿಎಲ್ ಟ್ರೋಫಿಯನ್ನ ತೆಗೆದುಕೊಂಡು ಹೋಗಿ ಕೃಷ್ಣನ ಮುಂದೆ ಇರಿಸಿ, ಭಜನೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ತದನಂತರ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕನ ಮಂದಿರಕ್ಕೆ ತೆರಳಿ ಐಪಿಎಲ್ ಟ್ರೋಫಿಗೆ ಪೂಜೆ ಸಲ್ಲಿಸಿದ್ದಾರೆ.
ರೋಚಕ ಹಂತದಿಂದ ಕೂಡಿದ್ದ ಫೈನಲ್ನಲ್ಲಿ ಮುಂಭೈ ಇಂಡಿಯನ್ಸ್ ಕೇವಲ 1ರನ್ಗಳ ಗೆಲುವು ದಾಖಲು ಮಾಡಿತ್ತು. ಕೊನೆಯ ಓವರ್ನಲ್ಲಿ ನೀತಾ ಅಂಬಾನಿ ಪ್ರಾರ್ಥನೆ ಮಾಡುತ್ತಿದ್ದ ದೃಶ್ಯ ಸಹ ಮೇಲಿಂದ ಮೇಲೆ ಕಂಡು ಬಂದಿದ್ದವು.