ಕರ್ನಾಟಕ

karnataka

ETV Bharat / briefs

ಮತ್ತೆ ನೋ ಕಮೆಂಟ್ಸ್​ ಎಂದ ನೀರವ್​ ಮೋದಿ... ಪ್ರಶ್ನೆಗೆ ಉತ್ತರಿಸದೆ ಓಡಿ ಹೋದ ಸುಸ್ತಿದಾರ - ನವದೆಹಲಿ

ವೆಸ್ಟ್​ಮಿನಿಸ್ಟರ್​ ಕೋರ್ಟ್​ನಲ್ಲಿ ಬಂಧನ ವಾರೆಂಟ್​ ಕೂಡ ಎದುರಿಸುತ್ತಿರುವ ನೀರವ್​ ಮೋದಿ, ಈ ಸಾರಿಯೂ ಕೂಡ ತಮ್ಮ ನೋ ಕಮೆಂಟ್ಸ್ ಉತ್ತರದ ಸರಣಿಗಳನ್ನು ಮುಂದುವರಿಸಿದರು.

ನೀರವ್​ ಮೋದಿ

By

Published : Mar 19, 2019, 1:22 PM IST

ನವದೆಹಲಿ: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ ಕೋಟ್ಂತರ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರೋದ್ಯಮಿ ನೀರವ್​ ಮೋದಿ ಲಂಡನ್​ ಬೀದಿಗಳಲ್ಲಿ ಭಾರಿ ಮುಜುಗರ ಎದುರಿಸಿದರು.

ಈಚೆಗಷ್ಟೆ ಅಂತಾರಾಷ್ಟ್ರೀಯ ಮಾಧ್ಯಮದವರ ಪ್ರಶ್ನೆ ಎದುರಿಸಲಾಗದೆ ನೋ ಕಮೆಂಟ್ಸ್​ ಎಂದಷ್ಟೇ ಹೇಳಿದ್ದ ನೀರವ್​ ಮೋದಿ, ಭಾರತದ ರಾಷ್ಟ್ರೀಯ ಮಾಧ್ಯಮದ ಪ್ರತಿನಿಧಿಯೊಬ್ಬರಿಗೆ ಲಂಡನ್​ ಬೀದಿಯಲ್ಲಿ ಸಿಕ್ಕಿದ್ದು, ಅವರ ಪ್ರಶ್ನೆ ತಡೆಯಲಾರದೆ ಓಡಿಹೋದ ಪ್ರಸಂಗವೂ ಎದುರಾಯಿತು.

ವೆಸ್ಟ್​ಮಿನಿಸ್ಟರ್​ ಕೋರ್ಟ್​ನಲ್ಲಿ ಬಂಧನ ವಾರೆಂಟ್​ ಕೂಡ ಎದುರಿಸುತ್ತಿರುವ ನೀರವ್​ ಮೋದಿ, ಈ ಸಾರಿಯೂ ಕೂಡ ತಮ್ಮ ನೋ ಕಮೆಂಟ್ಸ್ ಉತ್ತರದ ಸರಣಿಗಳನ್ನು ಮುಂದುವರಿಸಿದರು.

ನೀವು ಭಾರತಕ್ಕೆ ವಾಪಸ್​ ಹೋಗುತ್ತೀರಾ ಎಂದು ಕೇಳಿದ್ದಕ್ಕೆ ನೋ ಕಮೆಂಟ್ಸ್​ ಎಂದ ನೀರವ್​ ಮೋದಿ, ನಿಮ್ಮ ವಿರುದ್ಧ ಅರೆಸ್ಟ್​ ವಾರೆಂಟ್​ ದಾಖಲಾಗಿದೆಯಲ್ಲಾ ಎಂದು ಕೇಳಿದ್ದಕ್ಕೆ ರಸ್ತೆ ಬಿಟ್ಟು ಇನ್ನೊಂದು ಬದಿಗೆ ಓಡಿಹೋದರು.

ಹೋಟೆಲ್​ಗೆ ಹೋದ ಅವರನ್ನು ಬಿಡದೆ ತಮ್ಮ ಪ್ರಶ್ನೆಗಳನ್ನು ಮುಂದುವರಿಸಿದ ಪತ್ರಕರ್ತ ಈಗ ಅರೆಸ್​​ ವಾರೆಂಟ್​ ಬಂದಿದೆ, ನೀವು ಭಾರತಕ್ಕೆ ಹೋಗುತ್ತೀರಾ ಅಥವಾ ಬೇರೆ ಎಲ್ಲಿಗಾದರೂ ಹೋಗುವ ಪ್ಲಾನ್​ ಇದೆಯಾ ಎಂದು ಕೇಳಿದಾಗ ಅದಕ್ಕೂ ಕೂಡ ನೋ ಕಮೆಂಟ್ಸ್​ ಎಂದಷ್ಟೇ ಅವರು ಉತ್ತರಿಸಿದರು.

ABOUT THE AUTHOR

...view details