ಯಾದಗಿರಿಯಲ್ಲಿ ಇಂದು 9 ಕೋವಿಡ್ ಸೋಂಕಿತರು ಪತ್ತೆ
ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ಯಾದಗಿರಿ ಜಿಲ್ಲೆಯಲ್ಲಿ ಇಂದು ಒಂಭತ್ತು ಜನರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.
ಯಾದಗಿರಿ: ಜಿಲ್ಲೆಯಲ್ಲಿಂದು ಮತ್ತೆ 9 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಸುರಪುರ ತಾಲೂಕಿನ ಹೇಮನೂರ ಗ್ರಾಮದ 38 ವರ್ಷದ ಪುರುಷ (ರೋಗಿ -13410), ಸುರಪುರ ತಾಲ್ಲೂಕಿನ ಸೂಗೂರು ಗ್ರಾಮದ 66 ವರ್ಷದ ಪುರುಷ (ರೋಗಿ -13411), ಸುರಪುರ ತಾಲೂಕಿನ ದೇವಾಪುರ ಗ್ರಾಮದ 38 ವರ್ಷದ ಪುರುಷ (ರೋಗಿ -13412), ಸುರಪುರ ತಾಲೂಕಿನ ದಿವಳಗುಡ್ಡದ 35 ವರ್ಷದ ಮಹಿಳೆ (ಪಿ-13413), ದಿವಳಗುಡ್ಡದ 48 ವರ್ಷದ ಮಹಿಳೆ (ಪಿ-13414), ಸುರಪುರ ತಾಲ್ಲೂಕಿನ ರಂಗಂಪೇಟೆಯ 26 ವರ್ಷದ ಪುರುಷ (ಪಿ-13415), ಯಾದಗಿರಿಯ ಮಾತಾ ಮಾಣಿಕೇಶ್ವರಿ ನಗರದ 35 ವರ್ಷದ ಪುರುಷ (ಪಿ-13416), ಸುರಪುರ ತಾಲೂಕಿನ ಕಲಾದೇವನಹಳ್ಳಿಯ 30 ವರ್ಷದ ಪುರುಷ (ಪಿ-13417), ಕಲಾದೇವನಹಳ್ಳಿಯ 20 ವರ್ಷದ ಮಹಿಳೆ (ಪಿ-13418) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಪ್ರಕರಣ ಸಂಖ್ಯೆ ರೋಗಿ -13413 ಮತ್ತು ರೋಗಿ-13414ರ ಮಹಿಳೆಯರು ರೋಗಿ-8227ರ ಸಂಪರ್ಕದ ಹಿನ್ನೆಲೆ ಹೊಂದಿದ್ದಾರೆ. ರೋಗಿ-13416ರ ವ್ಯಕ್ತಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಉಳಿದವರು ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ದೆಹಲಿ ಹಾಗೂ ಮಹಾರಾಷ್ಟ್ರದ ಮುಂಬೈಯಿಂದ ಯಾದಗಿರಿ ಜಿಲ್ಲೆಗೆ ಹಿಂದಿರುಗಿರುತ್ತಾರೆ.
ಸೋಂಕು ಪತ್ತೆಯಾದವರನ್ನೆಲ್ಲ ಚಿಕಿತ್ಸೆಗಾಗಿ ಜಿಲ್ಲೆಯ ನಿಗದಿತ ಕೋವಿಡ್ 19 ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 939 ಪ್ರಕರಣಗಳ ಪೈಕಿ 823 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಬ್ಬರು ಮೃತಪಟ್ಟಿರುತ್ತಾರೆ.