ಕರ್ನಾಟಕ

karnataka

ETV Bharat / briefs

"ಪ್ರಿಯಾಂಕಾ ಮಿಸ್​ ಯೂ": ಫೋಟೋ ಶೇರ್​ ಮಾಡಿ ಮನಬಿಚ್ಚಿ ಮಾತನಾಡಿದ ನಿಕ್​ - ಅಮೆರಿಕದ ಪಾಪ್ ತಾರೆ ನಿಕ್ ಜೊನಸ್

ಪಾಪ್​ ಸ್ಟಾರ್​ ನಿಕ್​ ಜೊನಸ್​, ಪತ್ನಿ ಪ್ರಿಯಾಂಕಾ ಚೋಪ್ರಾರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹೀಗೆಂದು ಇನ್​ಸ್ಟಾಗ್ರಾಂನಲ್ಲಿ ಪ್ರಿಯಾಂಕಾ ಜೊತೆಯಾಗಿರುವ ಫೋಟೋವನ್ನು ಶೇರ್ ಮಾಡುವ ಮೂಲಕ ಜೊನಸ್​ ಹೇಳಿದ್ದಾರೆ.

 ಪ್ರಿಯಾಂಕ ಮತ್ತು ನಿಕ್​
ಪ್ರಿಯಾಂಕ ಮತ್ತು ನಿಕ್​

By

Published : Jun 14, 2021, 4:43 PM IST

ಹೈದರಾಬಾದ್:ಅಮೆರಿಕದ ಪಾಪ್ ತಾರೆ ನಿಕ್ ಜೊನಸ್ ಅವರು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ವೊಂದನ್ನು ಮಾಡಿದ್ದು, ಪತ್ನಿ ಪ್ರಿಯಾಂಕಾ ಚೋಪ್ರಾ ಅವರನ್ನು ಬಹಳಷ್ಟು ಮಿಸ್​ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಪ್ರಿಯಾಂಕಾ ಮತ್ತು ನಿಕ್​ ಜೊತೆಯಾಗಿರುವ ಫೋಟೋವನ್ನು ಶೇರ್​ ಮಾಡಿಕೊಂಡಿದ್ದು, “ಮಿಸ್ಸಿಂಗ್​ ಮೈ ಹಾರ್ಟ್​” ಎಂದು ಬರೆದುಕೊಂಡಿದ್ದಾರೆ.

ನಿಕ್ ಈ ಪೋಸ್ಟ್ ಅನ್ನು ಹಂಚಿಕೊಂಡ ಕೂಡಲೇ, ಅಭಿಮಾನಿಗಳು ಹಾರ್ಟ್​​ ಇಮೋಜಿಗಳನ್ನು ಕಮೆಂಟ್​ ಮಾಡುವ ಮೂಲಕ ಇವರ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಫೋಟೋ ಈಗಾಗಲೇ 1.1 ಮಿಲಿಯನ್​ ಲೈಕ್​ ಗಳಿಸಿದೆ.

ಪ್ರಿಯಾಂಕಾ ಪ್ರಸ್ತುತ ‘ಸಿಟಾಡೆಲ್​' ಶೋನ ಚಿತ್ರೀಕರಣದ ನಿಮಿತ್ತ ಲಂಡನ್​ಗೆ ತೆರಳಿದ್ದಾರೆ. ಅಮೆಜಾನ್​ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಶೋನಲ್ಲಿ 'ಗೇಮ್ ಆಫ್ ಥ್ರೋ' ಸೀಸನ್​ನ ಸ್ಟಾರ್ ​ರಿಚರ್ಡ್ ಮ್ಯಾಡೆನ್ ಕೂಡ ಅಭಿನಯಿಸುತ್ತಿದ್ದಾರೆ.

ABOUT THE AUTHOR

...view details