ಆಂಧ್ರಪ್ರದೇಶ: ನವವಿವಾಹಿತೆ ಆಕಸ್ಮಿಕವಾಗಿ ಕಟ್ಟಡದ ಎರಡನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ವಿಶಾಖಪಟ್ಟಣಂನ ಗೊಲ್ಲ ಬೀದಿಯಲ್ಲಿ ನಡೆದಿದೆ.
ಮೂರು ದಿನಗಳ ಹಿಂದಷ್ಟೇ ಮದುವೆ.. ಫೋನ್ನಲ್ಲಿ ಬ್ಯುಸಿಯಾಗಿದ್ದ ನವವಿವಾಹಿತೆ ಕಟ್ಟಡದಿಂದ ಬಿದ್ದು ಸಾವು - ಆಂಧ್ರಪ್ರದೇಶ ಇತ್ತೀಚಿನ ಸುದ್ದಿ
ಕಳೆದ 3 ದಿನಗಳ ಹಿಂದೆ ವಿವಾಹವಾಗಿದ್ದ ಮಹಿಳೆ ಕಟ್ಟಡದ ಎರಡನೇ ಮಹಡಿಯಿಂದ ಬಿದ್ದು, ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
andrapradesh
ಪೀಟಲಾ ಕಿನ್ನೆರಾ (29) ಮೃತ ಮಹಿಳೆ. ಕಳೆದ ಮೂರು ದಿನಗಳ ಹಿಂದೆಯಷ್ಟೇ ದಿನೇಶ್ ಕುಮಾರ್ ಎಂಬಾತನನ್ನು ಕಿನ್ನೆರಾ ವಿವಾಹವಾಗಿದ್ದಳು. ಕಟ್ಟಡದ ಎರಡನೇ ಮಹಡಿಯಲ್ಲಿ ನಿಂತು ಮೊಬೈಲ್ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಕಾಲು ಜಾರಿ ಕೆಳಗೆ ಬಿದ್ದಿದ್ದಾಳೆ. ತಕ್ಷಣವೇ ಅವಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಾಗಲೇ ಕಿನ್ನೆರಾ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಸದ್ಯ ಎಂವಿಪಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೆಜಿಎಚ್‌ಗೆ ಕಳುಹಿಸಲಾಗಿದೆ.
Last Updated : May 19, 2021, 8:52 AM IST