ಕರ್ನಾಟಕ

karnataka

ETV Bharat / briefs

ವಿಶ್ವಕಪ್​ 2019: ಶ್ರೀಲಂಕಾ ವಿರುದ್ಧ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಕಿವೀಸ್​ - ವಿಶ್ವಕಪ್​

2015ರ ವಿಶ್ವಕಪ್​ನ ರನ್ನರ್​ ಆಪ್​ ನ್ಯೂಜಿಲ್ಯಾಂಡ್​ 12ನೇ ಆವೃತ್ತಿಯ ತಮ್ಮ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡಿದೆ.

wc

By

Published : Jun 1, 2019, 2:44 PM IST

Updated : Jun 1, 2019, 3:08 PM IST

ಕಾರ್ಡಿಫ್​: 2019ರ ವಿಶ್ವಕಪ್​ನ ತನ್ನ ಮೊದಲ ಪಂದ್ಯದಲ್ಲಿ ಟಾಸ್​ಗೆದ್ದ ಕಿವೀಸ್​ ನಾಯಕ ವಿಲಿಯಮ್ಸನ್​ ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.

ಕಳೆದ ಬಾರಿ ಉತ್ತಮ ಪ್ರದರ್ಶನ ತೋರಿ ಫೈನಲ್​ಗೇರಿದ್ದ ಕಿವೀಸ್​ ಪೈನಲ್​ನಲ್ಲಿ ಆಸೀಸ್​ ವಿರುದ್ಧ ಸೋಲುಕಂಡು ರನ್ನರ್​ ಆಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈ ಬಾರಿಯಾದರು ಚಾಂಪಿಯನ್​ ಆಗಬೇಕೆಂಬ ಕನಸಿನೊಂದಿಗೆ ಇಂದು ಲಂಕಾ ವಿರುದ್ಧ ಕಾರ್ಡಿಫ್​ನಲ್ಲಿ ಕಣಕ್ಕಿಳಿಯುತ್ತಿದೆ. ಗಪ್ಟಿಲ್​, ಮನ್ರೊರಂತಹ ಸ್ಫೋಟಕ ಆಟಗಾರರ ಜೊತೆಗೆ ಟೇಲರ್​, ವಿಲಿಯಮ್ಸನ್​ ಹಾಗೂ ಲ್ಯಾಥಮ್​ರಂತಹ ಸ್ಥಿರತೆಯುಳ್ಳ ಆಟಗಾರರ ಬಲ ಕಿವೀಸ್​ಗಿದೆ. ಜೊತೆಗೆ ಬೌಲ್ಟ್​,ಹೆನ್ರಿ ಹಾಗೂ ಬೌಲರ್​ಗಳು, ನಿಶಾಮ್​ ಸ್ಯಾಂಟ್ನರ್​,ಹ್ರಯಾಂಡ್​ಹೋಮ್​ರಂತ್ ಬಲಿಷ್ಠ ಆಲ್​ರೌಂಡರ್​ಗಳಿರುವುದರಿಂದ ಈ ಪಂದ್ಯದಲ್ಲಿ ಕಿವೀಸ್​ ಮೇಲುಗೈ ಸಾಧಿಸಲಿದೆ.

ಲಂಕಾ ಅಭ್ಯಾಸ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲನುಭವಿಸಿದೆ. ಆದರೂ ಟೆಸ್ಟ್​ ತಂಡದ ಯಶಸ್ವಿನಾಯಕ, ಹಿರಿಯ ಆಟಗಾರರಾದ ಮಲಿಂಗಾ , ತಿರುಮನ್ನೆ, ಮ್ಯಾಥ್ಯೂಸ್​​​, ಹಾಗೂ ಯುವ ಆಟಗಾರರಾದ ಕುಶಾಲ್​ ಮೆಂಡಿಸ್​, ಕುಶಾಲ್​ ಪರೆರಾ ರಂತಹ ಆಟಗಾರರಿರುವುದರಿಂದ ಲಂಕಾ ಸುಲಭವಾಗಿ ಸೋಲೊಪ್ಪಲು ತಯಾರಿಲ್ಲ.

ಒಟ್ಟಾರೆ ಎರಡು ತಂಡಗಳು ತಮ್ಮ ಮೊದಲ ಗೆಲವಿಗಾಗಿ ಹಾತೊರೆಯುತ್ತಿದ್ದು, ವಿಜಯಲಕ್ಷ್ಮಿ ಯಾರಪಾಲಾಗಲಿದೆ ಎಂದು ಕಾದುನೋಡಬೇಕಿದೆ.

ಮುಖಾಮುಖಿ:

ವಿಶ್ವಕಪ್​ನಲ್ಲಿ 10 ಪಂದ್ಯಗಳಲ್ಲಿ ಎರಡು ತಂಡಗಳು ಮುಖಾಮುಖಿಯಾಗಿದ್ದು ಲಂಕಾ 6ರಲ್ಲಿ ನ್ಯೂಜಿಲ್ಯಾಂಡ್​ 4 ರಲ್ಲಿ ಜಯ ಸಾಧಿಸಿದೆ.

ತಂಡಗಳು ಇಂತಿವೆ

ನ್ಯೂಜಿಲೆಂಡ್:

​ಕೇನ್​ ವಿಲಿಯಮ್ಸನ್​ (ನಾಯಕ), ಟ್ರೆಂಟ್​ ಬೌಲ್ಟ್​, ಕಾಲಿನ್​ ಡಿ ಗ್ರ್ಯಾಂಡ್​ಹೋಮ್​, ಲೂಕಿ ಫರ್ಗ್ಯುಸನ್​, ಮಾರ್ಟಿನ್​ ಗಪ್ಟಿಲ್​, ಮ್ಯಾಟ್​ ಹೆನ್ರಿ, ಟಾಮ್​ ಲ್ಯಾಥಮ್​​, ಕಾಲಿನ್​ ಮನ್ರೊ, ಜಿಮ್ಮಿ ನಿಶಾಮ್​, ಮಿಚೆಲ್​ ಸ್ಯಾಂಟ್ನರ್​, ರಾಸ್​ ಟೇಲರ್​.

ಶ್ರೀಲಂಕಾ:

ದಿಮುತ ಕರುಣಾರತ್ನೆ (ನಾಯಕ), ಧನಂಜಯ್​ ಡಿ ಸಿಲ್ವಾ, ಸುರಂಗ ಲಕ್ಮಲ್​, ಲಸಿತ್​ ಮಲಿಂಗ, ಏಂಜೆಲೊ ಮ್ಯಾಥ್ಯೂಸ್​, ಕುಶಾಲ್ ಮೆಂಡಿಸ್​, ಜೀವನ್​ ಮೆಂಡಿಸ್​, ಕುಶಾಲ್​ ಪರೇರ, ತಿಸಾರ ಪೆರೆರ, ಲಾಹಿರು ತಿರುಮನ್ನೆ, ಇಸುರು ಉಡಾನ, ಜೆಫ್ರಿ ವಾಂಡರ್ಸೆ

Last Updated : Jun 1, 2019, 3:08 PM IST

ABOUT THE AUTHOR

...view details