ಮಂಗಳೂರು: ಇಲ್ಲಿನ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಪ್ರಾಣಿಗಳಿಗೂ ಕ್ವಾರಂಟೈನ್ ಮಾಡುವ ವ್ಯವಸ್ಥೆ ಹಿಂದಿನಿಂದಲೂ ಇದೆ. ಇದರ ಉನ್ನತೀಕರಿಸಲು ಪ್ರತ್ಯೇಕ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಪಿಲಿಕುಳ ಉದ್ಯಾನದಲ್ಲಿ ಪ್ರಾಣಿಗಳಿಗೂ ಕ್ವಾರಂಟೈನ್ - Pilikula latest news
’’ಈ ಹಿಂದಿನಿಂದಲೂ ಪ್ರಾಣಿ-ಪಕ್ಷಿಗಳನ್ನು ಕ್ವಾರಂಟೈನ್ ಮಾಡುವ ವ್ಯವಸ್ಥೆ ಇತ್ತು. ಇದನ್ನು ಇದೀಗ ಉನ್ನತೀಕರಿಸಲಾಗುತ್ತಿದೆ ಎಂದು ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಹೆಚ್. ಜಯಪ್ರಕಾಶ್ ಭಂಡಾರಿ ಹೇಳಿದ್ದಾರೆ.
![ಪಿಲಿಕುಳ ಉದ್ಯಾನದಲ್ಲಿ ಪ್ರಾಣಿಗಳಿಗೂ ಕ್ವಾರಂಟೈನ್ Pilikula](https://etvbharatimages.akamaized.net/etvbharat/prod-images/768-512-10:15-kn-mng-01-pilikula-photo-7202146-11062020095247-1106f-1591849367-165.jpg)
ಪಿಲಿಕುಳ ಉದ್ಯಾನವನಕ್ಕೆ ದೇಶ, ವಿದೇಶದ ಮೃಗಾಲಯದಿಂದ ಪ್ರಾಣಿ - ಪಕ್ಷಿಗಳನ್ನು ಕರೆ ತರಲಾಗುತ್ತದೆ. ಹೀಗೆ ತಂದ ಪ್ರಾಣಿ - ಪಕ್ಷಿಗಳನ್ನು ನೇರವಾಗಿ ಪ್ರವಾಸಿಗರ ವೀಕ್ಷಣೆಗೆ ಬಿಡಲಾಗುವುದಿಲ್ಲ. ತಪಾಸಣೆ ನಡೆಸಿ ಎರಡು ತಿಂಗಳ ಕಾಲ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗುತ್ತದೆ. ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಿ ಯಾವುದೇ ರೋಗ ಲಕ್ಷಣ ಇಲ್ಲ ಎಂದು ಬಳಿಕ ಮೃಗಾಲಯಕ್ಕೆ ಬಿಡಲಾಗುತ್ತದೆ.
ಈ ಕುರಿತು ಮಾತನಾಡಿದ ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಹೆಚ್. ಜಯಪ್ರಕಾಶ್ ಭಂಡಾರಿ, ’’ಈ ಹಿಂದಿನಿಂದಲೂ ಪ್ರಾಣಿ-ಪಕ್ಷಿಗಳನ್ನು ಕ್ವಾರಂಟೈನ್ ಮಾಡುವ ವ್ಯವಸ್ಥೆ ಇತ್ತು. ಇದನ್ನು ಇದೀಗ ಉನ್ನತೀಕರಿಸಲಾಗುತ್ತಿದೆ. ಇದಕ್ಕಾಗಿ ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ. ಕೊರೊನಾ ಕಾರಣದಿಂದ ಹೆಚ್ಚಿನ ಜಾಗ್ರತೆಯನ್ನು ಮಾಡಬೇಕಾಗುತ್ತದೆ’’ ಎಂದು ತಿಳಿಸಿದರು.