ಕರ್ನಾಟಕ

karnataka

ETV Bharat / briefs

ಈಶಾನ್ಯ ಸಾರಿಗೆ ಸಂಸ್ಥೆ ಬಸ್ ಡಿಪೋದಲ್ಲಿ ಡೀಸೆಲ್​ ಕಳ್ಳತನ - NEKSRTC DISEL ROBRRY

ಬೀದರ್​​ನ ಈಶಾನ್ಯ ಸಾರಿಗೆ ಸಂಸ್ಥೆ ಬಸ್ ಡಿಪೋದ ಪೆಟ್ರೋಲ್ ಬಂಕ್​ನಲ್ಲಿ ಸಾವಿರಾರು ಲೀಟರ್ ಡೀಸೆಲ್ ಕಳುವಾಗಿದೆ.

ಭಾಲ್ಕಿ ಎನ್​ಡಬ್ಲೂಕೆಎಸ್​ಆರ್​ಟಿಸಿ ಬಸ್​ ಘಟಕ

By

Published : May 12, 2019, 10:10 PM IST

ಬೀದರ್: ಇಲ್ಲಿನ ಈಶಾನ್ಯ ಸಾರಿಗೆ ಸಂಸ್ಥೆ ಬಸ್ ಡಿಪೋದ ಪೆಟ್ರೋಲ್ ಬಂಕ್​ನಲ್ಲಿ ಬರೋಬ್ಬರಿ 5,000 ಲೀಟರ್ ಡೀಸೆಲ್ ಕಳವು ಮಾಡಿದ ಪ್ರಕರಣ ನಡೆದಿದ್ದು, ಕಳ್ಳರ ಪತ್ತೆಗೆ ಪೊಲೀಸರು ಬಲೆಬೀಸಿದ್ಧಾರೆ.

ಜಿಲ್ಲೆಯ ಭಾಲ್ಕಿ ಬಸ್ ಡಿಪೋದಲ್ಲಿ ತಡರಾತ್ರಿಡೀಸೆಲ್ ಕಳ್ಳತನ ಮಾಡಿರುವ ಘಟನೆ ನಡೆದಿದೆ.ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಹಾಯವಿಲ್ಲದೇ ಈ ಕೃತ್ಯ ನಡೆಸಲು ಸಾಧ್ಯವೇ ಇಲ್ಲ ಎಂಬ ಆರೋಪ ಕೇಳಿಬಂದಿದೆ. ಇನ್ನು ಭಾಲ್ಕಿ ನಗರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಘಟನೆಯಿಂದ ಬೆಚ್ಚಿಬಿದ್ದ ಈಶಾನ್ಯ ಸಾರಿಗೆ ಸಂಸ್ಥೆ ಹಿರಿಯ ಅಧಿಕಾರಿಗಳು ಪ್ರಕರಣದ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಘಟಕದ ವ್ಯವಸ್ಥಾಪಕರಿಗೆ ಸೂಚನೆ ನೀಡಿದ್ದಾರೆ.

For All Latest Updates

ABOUT THE AUTHOR

...view details